ದೌರ್ಜನ್ಯ : ದಲಿತರ ಪರ ಪೇಜಾವರ ಶ್ರೀಗಳ ಉಪವಾಸ
ಗುಂಡ್ಲುಪೇಟೆ,
ಸೆ. 8 : ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಅಂಕಹಳ್ಳಿಯಲ್ಲಿ ಸಹಬಾಳ್ವೆ ನೆಲೆಯೂರಲಿ, ಸೌಹಾರ್ದ ಮೂಡಲಿ ಎನ್ನುವ ಸದಾಶಯದೊಂದಿಗೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ಮಂಗಳವಾರ ಉಪವಾಸ ನಡೆಸಿದರು. id="toptextpromo">ಗ್ರಾಮದಲ್ಲಿ
ದಲಿತರಿಗೆ ಸಾಮಾಜಿಕ ಬಹಿಷ್ಕಾರ ಪ್ರಕರಣ ನಡೆದಿತ್ತು. ನಗರದ ಸರಸ್ವತಿಪುರಂನಲ್ಲಿರುವ ಶ್ರೀಕೃಷ್ಣಧಾಮದಲ್ಲಿ ಮಧ್ಯಾಹ್ನ 1.45 ರಿಂದ ಉಪವಾಸ ಆರಂಭಿಸಿದ ಶ್ರೀಗಳು ಬುಧವಾರ ಮಧ್ಯಾಹ್ನ 1.45ಕ್ಕೆ ಅಂತ್ಯಗೊಳಿಸಲಿದ್ದಾರೆ. ಸದಾ ಚಟುವಟಿಕೆಯಿಂದಿರುವ ಸ್ವಾಮೀಜಿ ಉಪವಾಸದ ವೇಳೆಯೂ ಸುಮ್ಮನೆ ಕುಳಿತಿಲ್ಲ. id='are-slot-1' class='oiad oi-axt oiadv'> id='top-searched-articles'>ತಮ್ಮ
ಶಿಷ್ಯ ವೃಂದವನ್ನು ಮುಂದೆ ಕೂರಿಸಿಕೊಂಡು ಪ್ರವಚನ ನೀಡುವಲ್ಲಿ ನಿರತರಾಗಿದ್ದಾರೆ. ಜತೆಗೆ ವೇದಾಧ್ಯಯನದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಉಪವಾಸ ಯಾರ ವಿರುದ್ದ ಪ್ರತಿಭಟನೆಯೂ ಅಲ್ಲ, ಪಶ್ಚಾತ್ತಾಪವೂ ಅಲ್ಲ. ದೇವರ ಪ್ರಾರ್ಥನೆ. ಎಲ್ಲಿಯೂ ಹಿಂದೂಗಳಲ್ಲಿ ಘರ್ಷಣೆ, ಗಲಾಟೆ, ವೈಮನಸ್ಸು ಆಗಬಾರದು ಎನ್ನುವುದು ಆಶಯ. ಅದಕ್ಕಾಗಿ ಉಪವಾಸ ನಡೆಸುತ್ತಿದ್ದು, ಆ ಮೂಲಕ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದೇನೆ ಎಂದರು.











Click it and Unblock the Notifications