ಹುಲಿ ರಕ್ಷಿಸಲು ಮುಂದಾದ ಎಂ ಎಸ್ ಧೋನಿ
ಡೆಹ್ರಾಡೂನ್,
ಸೆ. 5 : ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತಂಡದ ನೇತೃತ್ವ, ವಿಕೆಟ್ ಗಳ ಹಿಂದೆ ಕೀಪಿಂಗ್ ಮಾಡುವುದರ ಜೊತೆಗೆ ಹುಲಿ ರಕ್ಷಣೆಗೆ ಮುಂದಾಗಿದ್ದಾರೆ. ವಿನಾಶದ ಅಂಚಿನಲ್ಲಿರುವ ಹುಲಿ ಸಂತತಿ ರಕ್ಷಣೆಗಾಗಿ ಉತ್ತರಖಂಡದ ಹುಲಿಯ ಸಂರಕ್ಷಣೆ ಸಮಿತಿಯ ರಾಯಭಾರಿಯಾಗಿ ನೇಮಕವಾಗಿದ್ದಾರೆ. id="toptextpromo">ನಶಿಸುತ್ತಿರುವ
ಹುಲಿಗಳ ಸಂತತಿಯನ್ನು ಉಳಿಸಿ ರಕ್ಷಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಈ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಿದ್ದೇವೆ. ಭಾರತೀಯ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹುಲಿಗಳ ರಕ್ಷಣೆಗೆ ಕೈಜೋಡಿಸಿರುವುದು ಸಂತಸ ತಂದಿದೆ. ಉತ್ತರಖಂಡದ ಹುಲಿ ಸಂರಕ್ಷಣಾ ಸಮಿತಿ ಮತ್ತು ಕಾರ್ಬೆಟ್ ನ್ಯಾಷನಲ್ ಪಾರ್ಕ್ ಗೆ ವನ್ಯಜೀವಿಗಳ ರಕ್ಷಣೆಯ ರಾಯಭಾರಿಯಾಗಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಉತ್ತರಖಂಡದ ಮುಖ್ಯಮಂತ್ರಿ ರಮೇಶ್ ಪೋಕ್ರಿಯಾಲ್ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಹುಲಿಗಳ
ಸಂತತಿ ಕಡಿಮೆಯಾಗುತ್ತಿರುವುದು ಕಳವಳಕಾರಿ ಅಂಶ. ಹುಲಿಗಳ ಸಂರಕ್ಷಣೆಗೆ ಉತ್ತರಖಂಡ ಸರಕಾರ ಕಾರ್ಯಪ್ರವೃತ್ತರಾಗಿರುವುದು ಉತ್ತಮ ಹೆಜ್ಜೆ. ವನ್ಯಜೀವಿಗಳ ರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎಂದು ಮಹೇಂದ್ರ ಸಿಂಗ್ ಧೋನಿ ಹೇಳಿದರು. ಧೋನಿ ಜೊತೆ ಪತ್ನಿ ಸಾಕ್ಷಿಸಿಂಗ್ ಶನಿವಾರ ಜೆಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್ ಗೆ ಭೇಟಿ ನೀಡಿದ್ದರು.











Click it and Unblock the Notifications