ಏಡ್ಸ್ ಬಾಧಿತರನ್ನು ಮುಟ್ಟಲೊಲ್ಲದ ವೈದ್ಯ
ಹೊಸಪೇಟ,
ಸೆ. 4 : ಎಚ್‌ಐವಿ ಪೀಡಿತರಿಗೆ ಚಿಕಿತ್ಸೆ ನೀಡಲು ಸರ್ಕಾರಿ ವೈದ್ಯರು ನಿರಾಕರಿಸಿದ ಕಾರಣ ಎಚ್‌ಐವಿ ಪಾಸಿಟಿವ್ ಬಾಧಿತರ ಸಂಘಟನೆ ನಿತ್ಯ ವನದ ಸದಸ್ಯರು ವೈದ್ಯರ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿ ಘಟನೆ ಶನಿವಾರ ನಡೆದಿದೆ. id="toptextpromo">ಇಲ್ಲಿನ
ಸರಕಾರಿ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ಡಾ. ನಾಗಭೂಷಣ ಅವರು ಎಚ್‌ಐವಿ ಪೀಡಿತರನ್ನು ಕೈಯಿಂದ ಮುಟ್ಟುವುದಿಲ್ಲ. ಚಿಕಿತ್ಸೆ ನೀಡುವುದಿಲ್ಲ ಎಂದು ವಾಚಮಗೋಚರವಾಗಿ ಬೈಯ್ಯುತ್ತಾನೆ ಎಂದು ಎಚ್‌ಐವಿ ಪೀಡಿತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಘಟನೆ
ಕುರಿತು ಮಾಹಿತಿ ಪಡೆದ ಸಹಾಯಕ ಆಯುಕ್ತ ಕಾಶೀನಾಥ್ ಪವಾರ್, ಪ್ರತಿಭಟನಾ ನಿರತರ ಅಹವಾಲು ಸ್ವೀಕರಿಸಿ ವೈದ್ಯರನ್ನು ಸ್ಥಳದಲ್ಲೇ ತೀವ್ರ ತರಾಟೆಗೆ ತೆಗೆದುಕೊಂಡರು. 'ಆರೋಗ್ಯ ರಕ್ಷಾ ಕವಚ" ಯೋಜನೆಯಿಂದ ಕೈಗವಸುಗಳನ್ನು ತತ್‌ಕ್ಷಣವೇ ಖರೀದಿ ಮಾಡಬೇಕು ಎಂದು ಆದೇಶ ನೀಡಿದರು. ಮತ್ತು ವೈದ್ಯರ ವಿರುದ್ಧ ಕಾರಣ ಕೇಳಿ ನೋಟೀಸ್ ಜಾರಿ ಮಾಡಲು ಜಿಲ್ಲಾ ವೈದ್ಯಾಧಿಕಾರಿಗಳಿಗೆ ಶಿಫಾರಸು ಮಾಡಿದರು.











Click it and Unblock the Notifications