ಪತಿಗೆ ವೀರಸ್ವರ್ಗ : ಪತ್ನಿಗೆ ಹೆರಿಗೆ ನೋವು

ಅದಕ್ಕೂ ಮೊದಲು ಪಾರ್ಥೀವ ಶರೀರ ಗ್ರಾಮಕ್ಕೆ ಆಗಮಿಸುತ್ತಿದ್ದಂತೆಯೇ ಭವ್ಯವಾಗಿ ಬರಮಾಡಿಕೊಳ್ಳಲಾಯಿತು. ಯೋಧನ ಪಾರ್ಥೀವ ಶರೀರ ನೋಡುತ್ತಿದ್ದಂತೆಯೇ ಗ್ರಾಮದ ಜನರು ಶೋಕ ಸಾಗರದಲ್ಲಿ ಮುಳುಗಿದರು. ನಕ್ಸಲೀಯರ ಅಟ್ಟಹಾಸಕ್ಕೆ ಜೀವ ಕಳೆದುಕೊಂಡ ತಮ್ಮೂರಿನ ಹುಡುಗನ ಪಾರ್ಥೀವ ಶರೀರವನ್ನು ಗ್ರಾಮದಾದ್ಯಂತ ಮೆರವಣಿಗೆ ಮಾಡಿದ ನಂತರ ಅಂತ್ಯಕ್ರಿಯೆ ಮಾಡಲಾಯಿತು.
ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಭೀಮಾಶಂಕರ ಹಡಪದ ಭಾನುವಾರ ಬೆಳಗ್ಗೆ ಛತ್ತೀಸ್ ಗಢದ ಕಾನ್ಕೇರ ಜಿಲ್ಲೆಯ ಬಸ್ತಾರ ಅರಣ್ಯ ಪ್ರದೇಶದಲ್ಲಿ ಮಾವೋವಾದಿಗಳು ನಡೆಸಿದ ನೆಲ ಬಾಂಬ್ ವಿಧ್ವಂಸಕ ಕೃತ್ಯಕ್ಕೆ ಪ್ರಾಣ ಕಳೆದುಕೊಂಡಿದ್ದರು. ಭೀಮಾಶಂಕರ ಅವರ ಪಾರ್ಥೀವ ಶರೀರ ಹೈದರಾಬಾದ್, ಬೆಂಗಳೂರು ಮೂಲಕ ಸ್ವಗ್ರಾಮಕ್ಕೆ ತರಲಾಯಿತು.
ಮನೆಯ ಆಧಾರಸ್ತಂಭ ಕಳಚಿತಲ್ಲ ಎಂದು ಪೋಷಕರು ಹತಾಶೆಗೊಂಡರೆ, ನರೋಣಾ ಗ್ರಾಮದ ಪ್ರತಿಯೊಬ್ಬರ ಕಣ್ಣಂಚಲ್ಲಿ ನೀರು. ವೀರಯೋಧನ ಗುಣಗಾನ ಹಾಗೂ ಹೆಮ್ಮೆಯ ಮಾತುಗಳು. ಭೀಮಾಶಂಕರ ಕಡುಬಡತನದಲ್ಲಿ ಪಿಯುಸಿವರೆಗೆ ಕಲಿತು 8 ವರ್ಷಗಳ ಹಿಂದೆ ಬಿಎಸ್ಎಫ್ ಯೋಧನಾಗಿ ದೇಶ ಸೇವೆಗೆ ಸೇರಿದಾಗ ಗ್ರಾಮದ ಮಂದಿ ಸಂಭ್ರಮಿಸಿದ್ದರು.
ಮೂರುವರೆ ವರ್ಷಗಳ ಹಿಂದೆ ಮದುವೆಯಾಗಿದ್ದ ಭೀಮಾಶಂಕರ ಅವರ ಪತ್ನಿ ಜಯಶ್ರೀ ಹೆರಿಗೆಗಾಗಿ ತವರು ಮನೆ ವಿಜಾಪುರದ ಆಸ್ಪತ್ರೆಯಲ್ಲಿ ನೋವಿನಲ್ಲಿ ನರಳುತ್ತಿದ್ದಾರೆ. ಪತಿಯ ಮರಣದ ಸಂಗತಿ ತಿಳಿದ ಜಯಶ್ರೀ ಅವರಿಗೆ ದಿಕ್ಕು ತೋಚದಂತಾಗಿದೆ. ಹಾಸನದ ಬಿಎಸ್ ಎಫ್ ಯೋಧ ಕೆಪಿ ಲೋಕೇಶ್ ಅವರು ಮಾವೋವಾದಿಗಳ ಕೃತ್ಯಕ್ಕೆ ಬಲಿಯಾಗಿದ್ದರು. ಸೋಮವಾರ ಅವರ ಅಂತ್ಯಕ್ರಿಯೆ ಸರಕಾರಿ ಗೌರವಗಳೊಂದಿಗೆ ನೆರವೇರಿಸಲಾಗಿತ್ತು.












Click it and Unblock the Notifications