ಕಾಮನ್ ವೆಲ್ತ್ ಕ್ರೀಡೆಗೆ ಧಾರವಾಡದ ಅಂಪೈರ್ ಗಳು
ಹುಬ್ಬಳ್ಳಿ,
ಆ. 30 : ನವದೆಹಲಿಯಲ್ಲಿ ನಡೆಯಲಿರುವ ಕಾಮನ್ ವೆಲ್ತ್ ಕ್ರೀಡಾಕೂಟದ ಟೇಬಲ್ ಟೆನಿಸ್ ಪಂದ್ಯಗಳಿಗೆ ಧಾರವಾಡದ ಇಬ್ಬರು ಅಂಪೈರ್ ಗಳಾಗಿ ಆಯ್ಕೆಯಾಗಿದ್ದಾರೆ. id="toptextpromo">ಅಕ್ಟೋಬರ್
3 ರಿಂದ ಆರಂಭವಾಗಲಿರುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಟೇಬಲ್ ಟೆನಿಸ್ ನಿರ್ಣಾಯಕರಾಗಿ ವಿದ್ಯಾನಗರಿ ಧಾರವಾಡದ ಟಿ ಜಿ ಉಪಾಧ್ಯೆ (ಚಾರ್ಲಿ) ಮತ್ತು ಆರ್ ಫ್ರಾನ್ಸಿಸ್ ಕಾರ್ಯನಿರ್ವಹಿಸಲಿದ್ದಾರೆ. ಈ ಇಬ್ಬರೂ ಭಾರತೀಯ ಜೀವ ವಿಮಾ ಕಂಪನಿಯ ನಿವೃತ್ತ ನೌಕರರಾಗಿದ್ದಾರೆ. ಯಾವುದೇ ಕ್ರೀಡೆಯಲ್ಲಿ ಅಂಪೈರಿಂಗ್ ಕಾರ್ಯ ಕೃತಜ್ಞತೆ ಇಲ್ಲದ ವೃತ್ತಿ. ಆಟ ಬಿಟ್ಟ ಮೇಲೂ ಅದರೊಂದಿಗೆ ನಂಟು ಉಳಿಸಿಕೊಳ್ಳಲು ಅಂಪೈರಿಂಗ್ ಮಾತ್ರ ಎನ್ನುತ್ತಾರೆ ಉಪಾಧ್ಯೆ. id='are-slot-1' class='oiad oi-axt oiadv'> id='top-searched-articles'>ಹಿರಿಯ
ಕೋಚ್ ಮತ್ತು ಅಂಪೈರ್ ಜೆ ಪುರುಷೋತ್ತಮ ರಾವ್ ಅವರ ಮಾರ್ಗದರ್ಶನದಲ್ಲಿ ಆಟಗಾರರಾಗಿ ಮತ್ತು ನಿರ್ಣಾಯಕರಾಗಿ ಇಬ್ಬರು ರೂಪಗೊಂಡಿದ್ದಾರೆ. ಆರ್ ಫ್ರಾನ್ಸಿಸ್ ಅವರು ಅಂತಾರಾಷ್ಟ್ರೀಯ ಅಂಪೈರ್ಸ್ ಅರ್ಹತಾ ಪರೀಕ್ಷೆಯಲ್ಲಿ ಭಾರತಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. 1994ರಲ್ಲಿ ಹೈದರಾಬಾದ್ ನಲ್ಲಿ ನಡೆದ ಏಷಿಯನ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಅಂಪೈರ್ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಸ್ಮರಣೆ ದಿನ ಎಂದು ನೆನಪಿಸಿಕೊಳ್ಳುತ್ತಾರೆ.











Click it and Unblock the Notifications