ಮತಾಂತರ ತಡೆಗೆ ದಲಿತರಿಗೆ ಪೇಜಾವರರ ಬ್ರಾಹ್ಮಣ ದೀಕ್ಷೆ
ಮೈಸೂರು,
ಆ. 27 : ದಲಿತರೇ ಮತಾಂತರ ಮೋಹಕ್ಕೆ ಒಳಗಾಗಬೇಡಿ. ಮತಾಂತರವಾಗುವುದಾದರೆ ವೈಷ್ಣವ ಮತಕ್ಕೆ ಮತಾಂತರವಾಗಿ,ನಾನು ನಿಮಗೆಲ್ಲಾ ದೀಕ್ಷೆ ಕೊಡುವೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ದಲಿತರಿಗೆ ಮನವಿ ಮಾಡಿಕೊಂಡಿದ್ದಾರೆ. id="toptextpromo">ನಗರದ
ದೇವರಾಜ್ ಅರಸ್ ಕಾಲೋನಿಗೆ ಭೇಟಿ ನೀಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದಲಿತರಿಗೆ ಆಗುತ್ತಿರುವ ಅನ್ಯಾಯವನ್ನು ಸಹಿಸಲಾರೆ ಎಂದರು. ಬಡತನವನ್ನೇ ಅಸ್ತ್ರವಾಗಿ ಬಳಸಿಕೊಂಡ ಕೆಲವು ಸಮಾಜಘಾತುಕ ಶಕ್ತಿಗಳು ಅಮಾಯಕ ಜನರಲ್ಲಿ ಆಸೆ ಆಮಿಷ ತೋರಿಸಿ ಮತಾಂತರ ಮಾಡುತ್ತಿರುವುದು ಅವ್ಯಾಹತವಾಗಿದೆ. ಮುಖ್ಯವಾಗಿ ದಲಿತರನ್ನು ಗುರಿಯಾಗಿಸಿಕೊಂಡು ಕೆಲ ಶಕ್ತಿಗಳು ತೆರೆಮರೆಯಲ್ಲಿ ಕೆಲಸ ಮಾಡುತ್ತಿವೆ. ಇಂತಹ ಶಕ್ತಿಗಳ ವಿರುದ್ಧ ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ಪೇಜಾವರ ಶ್ರೀಗಳು ಕಿವಿ ಮಾತು ಹೇಳಿದರು. id='are-slot-1' class='oiad oi-axt oiadv'> id='top-searched-articles'>ದಲಿತರೇ
ನಿಮಗೆ ಅನ್ಯಾಯವಾದರೆ ನಾನು ಸಹಿಸಲಾರೆ. ನಿಮ್ಮ ಕಷ್ಟ ನಷ್ಟಗಳ ಬಗ್ಗೆ ಒಟ್ಟಾಗಿ ಹೋರಾಡೋಣ. ಯಾವ ಕಾರಣಕ್ಕೂ ಮತಾಂತರಕ್ಕೆ ಮರಳಾಗಬೇಡಿ. ನಿಮಗೆ ಮತಾಂತರವಾಗಬೇಕು ಎನ್ನುವುದಾದರೆ ವೈಷ್ಣವ ಮತಕ್ಕೆ ಮತಾಂತರವಾಗಿ, ನಾನು ನಿಮಗೆ ದೀಕ್ಷೆ ಕೊಡುವೆ ಎಂದು ಶ್ರೀಗಳು ಹೇಳಿದರು.











Click it and Unblock the Notifications