ಕಾಶ್ಮೀರ ವಿವಾದಕ್ಕೆ ಜಿಹಾದ್ ಮದ್ದು : ಹಫೀಜ್
ಇಸ್ಲಾಮಾಬಾದ್,
ಆ. 25 : ಜಮ್ಮು ಕಾಶ್ಮೀರವನ್ನು ಭಾರತದ ನಿಯಂತ್ರಣದಿಂದ ಮುಕ್ತಗೊಳಿಸಲು ಜಿಹಾದ್ ಒಂದೇ ಮಾರ್ಗ ಎಂದು ಜಮಾತ್ ಉದ್ ದವಾ ಮುಖಂಡ ಹಫೀಜ್ ಮೊಹಮ್ಮದ್ ಸಯೀದ್ ಹೇಳಿದ್ದಾರೆ. id="toptextpromo">ಪಂಜಾಬ್
ಪ್ರಾಂತ್ಯದ ಡಾಸ್ಕ್ ಪ್ರದೇಶದಲ್ಲಿರುವ ಜಾಮೀಯಾ ಮಸೀದಿಯ ಮುಕರ್ರಂನಲ್ಲಿ ಜೆಯುಡಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. 2008ರ ಮುಂಬೈ ದಾಳಿ ಸೂತ್ರದಾರನಾಗಿರುವ ಹಫೀಜ್ ಈ ಹೇಳಿಕೆ ನೀಡಿದ್ದಾನೆ. ಕಾಶ್ಮೀರಿ ಹುತಾತ್ಮರ ತ್ಯಾಗಕ್ಕೆ ಶೀಘ್ರವೇ ಪ್ರತಿಫಲ ದೊರೆಯಲಿದೆ. ಕಾಶ್ಮೀರ ವಿಮೋಚನೆಯ ಕಿಡಿ ಶೀಘ್ರವೇ ಹೊತ್ತಿ ಉರಿಯಲಿದೆ ಎಂದು ಪ್ರಚೋದನಕಾರಿ ಭಾಷಣ ಮಾಡಿದ್ದಾನೆ. id='are-slot-1' class='oiad oi-axt oiadv'> id='top-searched-articles'>ಮುಂಬೈ
ದಾಳಿ ನಂತರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಜೆಯುಡಿ ಮೇಲೆ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಸಯೀದ್ ನನ್ನು ಆರು ತಿಂಗಳ ಕಾಲ ಗೃಹ ಬಂಧನದಲ್ಲಿ ಇರಿಸಲಾಗಿತ್ತು. ಕಳೆದ ವರ್ಷ ಲಾಹೋರ್ ಹೈಕೋರ್ಟ್ ನೀಡಿದ ತೀರ್ಪು ಆಧರಿಸಿ ಆತನನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.











Click it and Unblock the Notifications