ಆಧಾರ್ ಅಸಮರ್ಪಕ, ಆರೆಸ್ಸೆಸ್ ಅಸಮಾಧಾನ

Mohan Bhagwat
ಬೆಂಗಳೂರು, ಆ.16: ಅಕ್ರಮ ವಲಸೆ ಪಿಡುಗಿಗೆ ಪರಿಹಾರ ಕಂಡುಕೊಳ್ಳದೆ ಎಲ್ಲ ನಾಗರಿಕರಿಗೆ ಭಾವಚಿತ್ರವುಳ್ಳ ಗುರುತಿನ ಚೀಟಿ ನೀಡಲು ಮುಂದಾಗಿರುವ ಕೇಂದ್ರದ ಕ್ರಮಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘ ಚಾಲಕ್ ಮೋಹನ್‌ ಭಾಗ್ವತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ರಾಷ್ಟ್ರೋತ್ಥಾನ ಸಾಹಿತ್ಯ ಪರಿಷತ್ ಕಚೇರಿ ಕೇಶವ ಶಿಲ್ಪದಲ್ಲಿ 63ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡು, ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ರಾಷ್ಟ್ರದ ಎಲ್ಲ ನಾಗರಿಕರಿಗೆ ಭಾವಚಿತ್ರವುಳ್ಳ ಗುರುತಿನ ಚೀಟಿ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘ ಚಾಲಕ ಮೋಹನ್‌ಜೀ ಭಾಗ್ವತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೇಶದ ಗಡಿಗಳು ಸುರಕ್ಷಿತವಾಗಿಲ್ಲದ ಕಾರಣ, ನೆರೆ ರಾಷ್ಟ್ರಗಳ ಜನತೆ ಸುಲಭವಾಗಿ ದೇಶದೊಳಗೆ ನುಸುಳಿ ವಾಸಿಸುತ್ತಿದ್ದಾರೆ. ದೇಶದಲ್ಲಿ ಆರು ತಿಂಗಳ ಕಾಲ ವಾಸ ಮಾಡಿರುವ ದಾಖಲೆ ಒದಗಿಸಿದಲ್ಲಿ ನಾಗರಿಕರ ಗುರುತಿನ ಚೀಟಿ ನೀಡುವುದಾಗಿ ಕೇಂದ್ರ ಸರ್ಕಾರದ ಹೇಳಿದೆ.

ಸರ್ಕಾರದ ಈ ಕ್ರಮದಿಂದ ಗಡಿಯೊಳಗೆ ನುಸುಳಿ ಅಕ್ರಮವಾಗಿ ದೇಶದಲ್ಲಿ ವಾಸಿಸುತ್ತಿರುವ ಭಯೋತ್ಪಾದಕ ಕೂಡ ಗುರುತಿನ ಚೀಟಿ ಪಡೆಯುವಲ್ಲಿ ಯಾವುದೇ ಅನುಮಾನವಿಲ್ಲ ಎಂದವರು ಆತಂಕ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+