ಇಂಗ್ಲೀಷ್ ಪ್ರಿಮಿಯರ್ ಲೀಗ್ ಗೆ ಮರಡೋನಾ?

Maradona
ಬ್ಯೂನಸ್ ಐರೆಸ್, ಆ.16: ಅರ್ಜೆಂಟೀನಾ ಫುಟ್ಬಾಲ್ ತಂಡದ ಮಾಜಿ ತರಬೇತುದಾರ 'ಹ್ಯಾಂಡ್ ಆಫ್ ಗಾಡ್' ಖ್ಯಾತಿಯ ಮಾಜಿ ಫುಟ್ಬಾಲ್ ಪಟು ಡಿಯಾಗೋ ಮರಡೋನಾ ಇಂಗ್ಲೀಷ್ ಪ್ರಿಮಿಯರ್ ಲೀಗ್ ಗೆ ಸೇರಿಕೊಳ್ಳುವ ಸಾಧ್ಯತೆಗಳು ಕಂಡು ಬಂದಿವೆ.

ಆಸ್ಟನ್ ವಿಲ್ಲಾ ಕ್ಲಬ್ ನ ಮುಂದಿನ ಮ್ಯಾನೇಜರ್ ಹುದ್ದೆ ಮರಡೋನಾಗೆ ಕಾಯ್ದಿರಿಸಲಾಗಿದೆ ಎಂದು ಇಂಗ್ಲೀಷ್ ಮಾಧ್ಯಮಗಳು ವರದಿ ಮಾಡಿವೆ. ಸದ್ಯ ಆಸ್ಟನ್ ವಿಲ್ಲಾ ಕ್ಲಬ್ ನ ಮ್ಯಾನೇಜರ್ ಆಗಿದ್ದ ಮಾರ್ಟಿನ್ ಓ'ನಿಲ್ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಮರಡೋನಾವನ್ನು ತರಲು ಮಾತುಕತೆ ನಡೆದಿದೆ ಎಂದು ಮರಡೋನಾರ ಯುರೋಪಿಯನ್ ವಕ್ತಾರ ವಾಲ್ಟರ್ ಸೊರಿಯಾನೊ ಹೇಳಿದ್ದಾರೆ.

ಆದರೆ, ಮಾರ್ಟಿನ್ ಓ'ನಿಲ್ ಅವರ ಸ್ಥಾನಕ್ಕೆ ಇನ್ನೊಬ್ಬರನ್ನು ನೇಮಕ ಮಾಡಿಕೊಳ್ಳುವಲ್ಲಿ ಅವಸರಪಡದಿರಲು ಆಸ್ಟನ್ ವಿಲ್ಲಾ ನಿರ್ಧರಿಸಿದೆ. ಕೆವಿನ್ ಮಖ್ ಡೋನಾಲ್ಡ್ ಅವರನ್ನು ಹಂಗಾಮಿ ಕೋಚ್ ಆಗಿ ನೇಮಿಸಿದೆ.

ಮರಡೋನಾ ಇಂಗ್ಲೆಂಡ್ ನಂಟು:1986 ರ ವಿಶ್ವಕಪ್ ಕ್ವಾಟರ್ ಫೈನಲ್ಸ್ ನಲ್ಲಿ ಇಂಗ್ಲೆಂಡ್ ಅನ್ನು 1-2 ರಿಂದ ಅರ್ಜೆಂಟೀನಾ ಮಣಿಸಲು ಮರಡೋನಾ ನೆರವಾಗಿದ್ದರು. ಅಲ್ಲದೆ, ಹ್ಯಾಂಡ್ ಆಫ್ ಗಾಡ್' (ಕೈಯಿಂದ ಗೋಲ್ ಹೊಡೆದ ) ಕುಖ್ಯಾತಿಗೂ ಮರಡೋನಾ ಪಾತ್ರರಾಗಿದ್ದರು.

ಫೀಫಾ ವಿಶ್ವಕಪ್ 2010 ರ ಕ್ವಾಟರ್ ಫೈನಲ್ ನಲ್ಲಿ ಜರ್ಮನಿ ವಿರುದ್ಧ 4-0 ಅಂತರದ ಹೀನಾಯ ಸೋಲುಂಡ ಅರ್ಜೆಂಟೀನಾದ ಮುಖ್ಯ ಕೋಚ್ ಆಗಿದ್ದ ಮರಡೋನಾ, ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡಿ, ಕಣ್ಣೀರು ಸುರಿಸಿದ್ದರು.

ಪ್ರಿಮಿಯರ್ ಲೀಗ್ 2010: ಬರ್ಕಲೇ ಇಂಗ್ಲೀಷ್ ಪ್ರಿಮಿಯರ್ ಲೀಗ್ ಆ.14 ರಂದು ಆರಂಭವಾಗಿದ್ದು, 20 ತಂಡಗಳು ಭಾಗವಹಿಸಿವೆ. ಚೆಲ್ಸಿಯಾ, ಬ್ಲಾಕ್ ಪೂಲ್, ಆಸ್ಟನ್ ವಿಲ್ಲಾ, ವೊಲ್ಸ್, ಬ್ಲಾಕ್ ಬರ್ನ್ ಮೊದಲ ಪಂದ್ಯಗಳನ್ನು ಗೆದ್ದಿವೆ. ಬರ್ಮಿಂಗ್ ಹ್ಯಾಂ, ಸಂದರ್ ಲ್ಯಾಂಡ್, ಅರ್ಸೆನ್ಲ್, ಲಿವಿರ್ ಪೂಲ್, ಬೋಲ್ಟನ್, ಫುಲ್ ಹ್ಯಾಂ, ಮ್ಯಾಂಚೆಸ್ಟರ್ ಸಿಟಿ, ಟೊಂಟೆಹ್ಯಾಂ ಮೊದಲ ಪಂದ್ಯಗಳಲ್ಲಿ ಡ್ರಾ ಸಾಧಿಸಿವೆ.

ಸ್ಟೋಕ್ ಸಿಟಿ, ಎವರ್ಟನ್, ವೆಸ್ಟ್ ಹ್ಯಾಂ ಯುನೈಟಡ್, ವಿಗಾನ್ ಅಥ್ಲೆಟಿಕ್, ಡಬ್ಲ್ಯೂಬಿಎ ಮೊದಲ ಪಂದ್ಯದಲ್ಲೇ ಸೋಲುಂಡಿವೆ. (ಭಾನುವಾರದರ ಅಂಕ ಪಟ್ಟಿಯಂತೆ) ಮ್ಯಾಂಚೆಸ್ಟರ್ ಯುನೈಟೆಡ್, ನ್ಯೂ ಕ್ಯಾಸಲ್ ಪಂದ್ಯ ಆಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+