ಸಿದ್ರಾಮಯ್ಯ ನಾನ್ಯಾಕೆ ರಾಜೀನಾಮೆ ಕೊಡ್ಲಿ?

ಶನಿವಾರದ ಉದಯವಾಣಿ ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗಿರುವ ನಕ್ಸಲರ ಹಿಟ್ ಲಿಸ್ಟ್ ನಲ್ಲಿ ಸಿಎಂ ಎಂಬ ಸುದ್ದಿ ಪ್ರಸ್ತಾಪಿಸಿ ಮಾತನಾಡಿದ ಅವರು, ಇದಕ್ಕೆ ನಾನು ಹೆದರಲ್ಲ. ರಾಜ್ಯ ಹಿತಕ್ಕಾಗಿ ಪ್ರಾಣ ಕೊಡಲು ಸಿದ್ಧ, ಜನರ ನಂಬಿಕೆಗೆ ಮೋಸ ಮಾಡಲ್ಲ ಎಂದರು. ಇತ್ತೀಚೆಗೆ ನಡೆದ ಕಾಂಗ್ರೆಸ್ ಪಾದಯಾತ್ರೆ ಮತ್ತು ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ದೇಶಪಾಂಡೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನನ್ನ ರಾಜೀನಾಮೆ ಕೇಳಲು ನೀವ್ಯಾರು, ಯಾವ ಕಾರಣಕ್ಕೆ ರಾಜೀನಾಮೆ ನೀಡಬೇಕು. ರಾಜ್ಯದ 6 ಕೋಟಿ ಜನ ನನ್ನನ್ನು ಆಯ್ಕೆ ಮಾಡಿದ್ದಾರೆ. ಅವರು ಬೇಡ ಅಂದರೆ, ಕೂಡಲೇ ರಾಜೀನಾಮೆ ನೀಡುವೆ. ಆದರೆ, ನೀವು ಮಾಡುತ್ತಿರುವುದು ಏನು ? ನಿಮ್ಮ ಸ್ಥಾನ ಗಟ್ಟಿ ಮಾಡಿಕೊಳ್ಳಲು ನನ್ನ ರಾಜೀನಾಮೆ ನೀಡಬೇಕಾ ? ಯಾವ ಕಾರಣಕ್ಕೆ ರಾಜೀನಾಮೆ ನೀಡಬೇಕು ಹೇಳಿ ?
ಸಿದ್ರಾಮಯ್ಯ ಅವರೇ ನಿಮ್ಮ ಆಟ ನಡೆಯಲ್ಲ. ಬಿಜೆಪಿ ಸರಕಾರವನ್ನು ಅಲುಗಾಡಿಸುವುದು ಸುಲಭವಲ್ಲ. ಉಳಿದ ಎರಡು ಮೂಕ್ಕಾಲು ವರ್ಷಗಳ ಕಾಲ ಉತ್ತಮ ಆಡಳಿತವನ್ನು ನೀಡುತ್ತೇವೆಂದು ರಾಜ್ಯದ ಜನತೆಗೆ ಭರವಸೆ ನೀಡುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.
ಕೈಕಟ್ ಮಾಡ್ತೇವೆ : ಗೋವುಗಳನ್ನು ಕಡಿಯುವ ಕೈಗಳನ್ನು ಕಟ್ ಮಾಡುತ್ತೇವೆ ಎಂದು ಅಬ್ಬರಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಕೆ ಎಸ್ ಈಶ್ವರಪ್ಪ, ಮರು ಚುನಾವಣೆ ಬಂದಿವೆ. ನಾವು ಗೋವುಗಳನ್ನು ರಕ್ಷಿಸುತ್ತೇವೆಂದು ಮತ ಕೇಳುತ್ತೇವೆ. ನೀವು ಗೋವುಗಳನ್ನು ಕಡಿಯುತ್ತೇವೆಂದು ಮತ ಕೇಳಿ ಜನ ಯಾರಿಗೆ ಮತ ಹಾಕುತ್ತಾರೆ ನೋಡೋಣ ಎಂದು ಸವಾಲು ಹಾಕಿದರು.
ರಾಜ್ಯದಲ್ಲಿ ಕೆಲವರು ನಾಟಕ ಆರಂಭಿಸಿದ್ದಾರೆ. ಆಹಾರ ಪದ್ಧತಿ ಹೆಸರಿಸಿ ಗೋಹತ್ಯೆ ನಿಷೇಧ ಕಾಯ್ದೆಗೆ ವಿರೋಧಿಸಿದ್ದಾರೆ. ಇದನ್ನೇ ನೆಪವಾಗಿಟ್ಟುಕೊಂಡು ರಾಜ್ಯಪಾಲರ ಅವರ ಎಜೆಂಟ್ ರಂತೆ ವರ್ತಿಸುತ್ತಿದ್ದಾರೆ. ಇನ್ನ್ಯಾರನ್ನೂ ಮೆಚ್ಚಿಸಲು ರಾಜ್ಯಪಾಲರು ಮಾಡುತ್ತಿರುವ ಕೆಲಸ ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications