ಪಾಕ್ ಅಧ್ಯಕ್ಷ ಜರ್ದಾರಿಗೆ ಬೂಟೇಟು
ಲಂಡನ್,
ಆ. 9 : ಬರ್ಮಿಂಗ್ ಹ್ಯಾಂನಲ್ಲಿ ನಡೆದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಸಮಾವೇಶದಲ್ಲಿ ಪಾಕ್ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಅವರತ್ತ ಬೂಟು ಎಸೆದ ಘಟನೆ ನಡೆದಿದೆ. ಆದರೆ, ಇಂತಹ ಘಟನೆ ನಡೆದಿಲ್ಲ ಎಂದು ಅಧ್ಯಕ್ಷರ ನಿಕಟವರ್ತಿಗಳು ಹೇಳಿದ್ದಾರೆ. id="toptextpromo">ಪಾಕಿಸ್ತಾನದ
ಬಹುತೇಕ ಪ್ರದೇಶದಲ್ಲಿ ಪ್ರವಾಹ ಉಂಟಾಗಿದ್ದು ಅಲ್ಲಿನ ಜನರು ಸಂಕಷ್ಟದಿಂದ ಬಳಲುತ್ತಿದ್ದಾರೆ. ಹೀಗಿದ್ದಾಗ ಪಾಕ್ ಅಧ್ಯಕ್ಷರು ಲಂಡನ್ ಗೆ ಬಂದು ಸಮಾವೇಶ ಮಾಡುತ್ತಿರುವುದು ಏಕೆ ಎನ್ನುವುದು ಒಂದಾದರೆ, ಇಸ್ಲಾಮಾಬಾದ್ ನಲ್ಲಿ ಭಯೋತ್ಪಾದಕರನ್ನು ತಯಾರಿಸಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ಆಕ್ರೋಶ ಕಾರಣವಾಗಿದೆ, ಇದರಿಂದ ಕೋಪಗೊಂಡ ಶಮೀಮ್ ಖಾನ್(45) ಎಂಬಾತ ಜರ್ದಾರಿ ಮೇಲೆ ತನ್ನ ಎರಡು ಬೂಟುಗಳನ್ನು ಎಸೆದಿದ್ದಾನೆ. id='are-slot-1' class='oiad oi-axt oiadv'> id='top-searched-articles'>ಆದರೆ,
ಬೂಟಿನ ಏಟಿನಿಂದ ಸ್ವಲ್ಪದರಲ್ಲಿಯೇ ಪಾರಾಗಿದ್ದಾರೆ. ಕೂಡಲೇ ಎಚ್ಚತ್ತುಕೊಂಡ ಭದ್ರತಾ ಸಿಬ್ಬಂದಿ ಬೂಟು ಎಸೆದವನನ್ನು ಬಂಧಿಸಿ ವಿಚಾರಣೆ ಒಳಪಡಿಸಿದ್ದಾರೆ. ಅಲ್ಲದೇ ಸಮಾವೇಶದ ಹೊರಗೆ ಜರ್ದಾರಿಯನ್ನು ಉಚ್ಚಾಟಿಸಿ, ಪಾಕಿಸ್ತಾನ ಉಳಿಸಿ ಎಂಬ ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸುತ್ತಿರುವುದು ಕಂಡುಬಂದಿತು.











Click it and Unblock the Notifications