ಬಂಡವಾಳ ಆಕರ್ಷಣೆ 5 ನೇ ಸ್ಥಾನದಲ್ಲಿ ಕರ್ನಾಟಕ

ಆಸೋಚಾಮ್ ಅಂದಾಜನ್ನು ಬಿಡುಗಡೆ ಮಾಡಿದ ಪ್ರಧಾನ ಕಾರ್ಯದರ್ಶಿ ಡಿ ಎಸ್ ರಾವತ್ ಅವರು ಈ ಹೂಡಿಕೆಯಲ್ಲಿ ಶೇ.40 ರಷ್ಟು ಮಾತ್ರ ಕಾರ್ಯಗತವಾಗಿದ್ದು ಉಳಿದ ಶೇ.60 ರಷ್ಟು ಹೂಡಿಕೆಗಳು ಜಾಗತಿಕ ಆರ್ಥಿಕ ಹಿಂಜರಿತ ಹಾಗೂ ದೇಶದ ಆರ್ಥಿಕ ಹಿಂಜರಿತದ ಕಾರಣದಿಂದ ವಿಳಂಬವಾಗಿವೆ ಎಂದು ಹೇಳಿದೆ.
ದೇಶದಲ್ಲಿ ಹೂಡಿಕೆಯಾಗುವ ಒಟ್ಟು ಮೊತ್ತದ ಶೇ 7.1 ರಷ್ಟು ಕರ್ನಾಟಕಕ್ಕೆ ಲಭಿಸಿದೆ ಎಂದೂ ವರದಿ ಹೇಳಿದ್ದು ರಾಜ್ಯಕ್ಕೆ 5ನೇ ಸ್ಥಾನ ದೊರೆತಿದೆ. ಮೊದಲ ಸ್ಥಾನದಲ್ಲಿ ಗುಜರಾತ್, ಎರಡನೇ ಸ್ಥಾನದಲ್ಲಿ ತಮಿಳುನಾಡು, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶ ನಂತರದ ಸ್ಥಾನದಲ್ಲಿ ಇವೆ.
ರಾಜ್ಯದ ಹೂಡಿಕೆಯಲ್ಲಿ ಉತ್ಪಾದನಾ ರಂಗದ ಪಾಲು ಶೇ 42.5 ಆಗಿದ್ದು, ವಿದ್ಯುತ್ ರಂಗದ ಪಾಲು ಶೇ 22.3, ಸೇವಾ ಉದ್ಯಮದ ಪಾಲು ಶೇ 16.2 ಹಾಗೂ ರಿಯಲ್ ಎಸ್ಟೇಟ್ ಉದ್ಯಮದ ಪಾಲು ಶೇ 13.2 ಆಗಿದೆ.
ಮಾರ್ಚ್ 2009 ರಿಂದ 2010ರ ಮಾರ್ಚ್ ವರೆಗೆ ಹೂಡಿಕೆಗಲ್ಲಿ ಉತ್ಪಾದನಾ ರಂಗದ ಹೂಡಿಕೆಗಳಲ್ಲಿ ಶೇ 15.2ರಷ್ಟು ಹೆಚ್ಚಳವಾಗಿದ್ದು, ಗಣಿಗಾರಿಕೆ ಉದ್ಯಮದ ಹೂಡಿಕೆ ಹೆಚ್ಚಳ ಶೇ 1.7 ರಷ್ಟಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ನೀರಾವರಿ ಹೂಡಿಕೆಯಲ್ಲಿ ಶೇ 0.8ರಷ್ಟು ಕುಸಿತ ದಾಖಲಾಗಿದೆ.
ರಿಯಲ್ ಎಸ್ಟೇಟ್ ಉದ್ಯಮ ಹಿಂದಿನ ವರ್ಷಗಳಲ್ಲಿ ಶೇ 6.5ರಷ್ಟು ಕುಸಿತ ದಾಖಲಿಸಿದ್ದು, ಕಳೆದ ವರ್ಷ ಶೇ 0.3ರಷ್ಟು ಏರಿಕೆ ದಾಖಲಿಸಿದೆ. ಕೈಗಾರಿಕಾ ರಂಗದಲ್ಲಿ ರಾಜ್ಯ ಇತರ ರಾಜ್ಯಗಳಿಂದ ಸ್ಪರ್ಧೆಯನ್ನು ಎದುರಿಸುತ್ತಿದೆ ಎಂದು ಅಂದಾಜು ತಿಳಿಸಿದೆ.












Click it and Unblock the Notifications