51 ಸಾವಿರ ಕೋ ಎಲ್ಲಿ ಹೋಯ್ತು ? ಸಂತೋಷ ಹೆಗ್ಡೆ
ಬೆಂಗಳೂರು,
ಆ. 9 : ಕೇಂದ್ರ ಸರಕಾರದ ವಿವಿಧ ಯೋಜನೆ ಅಡಿಯಲ್ಲಿ ಬಿಡುಗಡೆ ಮಾಡಿದ ಅನುದಾನದಲ್ಲಿ 51 ಸಾವಿರ ಕೋಟಿ ರುಪಾಯಿ ಲೆಕ್ಕಕ್ಕೆ ಸಿಗುತ್ತಿಲ್ಲ ಎಂದು ಲೋಕಾಯುಕ್ತ ಸಂತೋಷ ಹೆಗ್ಡೆ ತಿಳಿಸಿದ್ದಾರೆ. id="toptextpromo">ರಾಜಸ್ತಾನ
ಯುವಕ ಸಂಘ ಏರ್ಪಡಿಸಿದ್ದ ಬುಕ್ ಬ್ಯಾಂಕ್ ಯೋಜನೆ ಪುಸ್ತಕ ವಿತರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. 2007-08 ನೇ ಸಾಲಿನ ವಿವಿಧ ಯೋಜನೆಗಳ ಅಡಿಯಲ್ಲಿ ಕೇಂದ್ರ ಸರಕಾರ ರಾಜ್ಯಕ್ಕೆ ಕೋಟ್ಯಂತರ ರುಪಾಯಿ ಬಿಡುಗಡೆ ಮಾಡಿತ್ತು. ಅದರಲ್ಲಿ 51 ಸಾವಿರ ಕೋಟಿ ರುಪಾಯಿ ಲೆಕ್ಕಕ್ಕೆ ಸಿಗುತ್ತಿಲ್ಲ. ಆಡಳಿತದಲ್ಲಿ ಭಾರಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದರ ನಿಯಂತ್ರಣಕ್ಕೆ ಯುವಕರು ಸಿದ್ಧರಾಗಬೇಕು ಎಂದು ಹೆಗ್ಡೆ ಕಿವಿ ಮಾತು ಹೇಳಿದರು. id='are-slot-1' class='oiad oi-axt oiadv'> id='top-searched-articles'>ಯಾವುದೇ
ವ್ಯಕ್ತಿಯಾಗಲೀ, ಮಾನವೀಯತೆ ಮತ್ತು ಪ್ರಾಮಾಣಿಕತೆ ಮೈಗೂಡಿಸಿಕೊಂಡು ಜೀವಿಸಬೇಕು. ಇಟ್ಟುಕೊಳ್ಳುವ ಗುರಿ ಕಾನೂನು ವ್ಯಾಪ್ತಿಯೊಳಗೆ ಸಾಧಿಸಬೇಕು. ಆದರೆ, ಹಲವಾರು ಕಾನೂನು ಮೀರಿ ತಮ್ಮ ಹಿತಾಸಕ್ತಿಯನ್ನು ಸಾಧನೆ ಮಾಡಿಕೊಳ್ಳುತ್ತಿರುವುದು ಅಪಾಯದ ಬೆಳವಣಿಗೆ ಎಂದು ಸಂತೋಷ ಹೆಗ್ಡೆ ಹೇಳಿದರು.











Click it and Unblock the Notifications