ಕಾಂಚೀಪುರಂ: ಕೋಲಾರದ ಕುಟುಂಬ ದುರ್ಮರಣ

ಮುಳಬಾಗಲು ತಾಲೂಕಿನ ನಾಗವಾರ ಗ್ರಾಮಕ್ಕೆ ಸೇರಿದ ಕುಟುಂಬದವರು, ಆಡಿ ಕೃತಿಕಾ ದಿನದಂದು ವೇಲ್ ಮುರಗನ್ ದೇವರಿಗೆ ಹರಕೆ ತೀರಿಸಲು ಕಾಂಚೀಪುರಂ ಸಮೀಪದ ತಿರುತ್ತಣಿಗೆ ಬಂದಿದ್ದರು. ಬೆಟ್ಟ ಹತ್ತಿ ಮುರಗನ್ ದೇವರಿಗೆ ನಮನ ಸಲ್ಲಿಸಿ ಹಿಂತಿರುಗುವ ವೇಳೆ ಕುದುರೈ ಕಲ್ಮಾಡು ಸಮೀಪದ ಸೇತುವೆ ಬಳಿ 15 ಜನರಿದ್ದ ಟಾಟಾ ಸುಮೋಗೆ ಲಾರಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಈ ದುರ್ಘಟನೆಯಲ್ಲಿ ಒಟ್ಟು ಎಂಟು ಜನ ಸ್ಥಳದಲ್ಲೆ ಸಾವನ್ನಪ್ಪಿದ್ದು, ಉಳಿದ ಏಳು ಜನರಿಗೆ ತೀವ್ರವಾಗಿ ಗಾಯಗಳಾಗಿವೆ. ಗಾಯಾಳುಗಳಿಗೆ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರನ್ನು ಶಿವಪ್ಪ(35), ರಾಣಿಯಮ್ಮ(28), ರೂಪ(7), ಸಾವಿತ್ರಮ್ಮ(28), ಸಹನ(6), ರಾಜಣ್ಣ(35), ಜಾನಕಿರಾಮ್(38) ಹಾಗೂ ಸುಮೋ ಚಾಲಕ ನಾಗರಾಜ್ (27) ಎಂದು ಗುರುತಿಸಲಾಗಿದೆ ಎಂದು ಇನ್ಸ್ ಪೆಕ್ಟರ್ ಜೈಶಂಕರ್ ಹೇಳಿದ್ದಾರೆ.
ಗ್ಯಾಲರಿ: ಕಾಂಚೀಪುರಂ ಸಮೀಪ ನಡೆದ ಅಪಘಾತ ದೃಶ್ಯಗಳು












Click it and Unblock the Notifications