ಪ್ರಾಣಕ್ಕೆ ಎರವಾದ ಹಾವುಗಳ ಮಿಲನ

ಚಿಕ್ಕನಹಳ್ಳಿ ಬಡಾವಣೆಯ ಗೋಣೆಪ್ಪ (40) ಆತ್ಮಹತ್ಯೆ ಮಂಗಳವಾರ ಮಾಡಿಕೊಂಡಿದ್ದಾರೆ. ಮೃತರ ತಂಗಿ ಲಕ್ಷ್ಮಮ್ಮ ಅವರ ವಿವಾಹ ಮೂರು ವರ್ಷದ ಹಿಂದೆ ಹರಪನಹಳ್ಳಿಯ ಯುವಕನ ಜತೆ ನಡೆದಿತ್ತು. ಆಕೆ ಬೆಳಗ್ಗೆ ಹೊಲಕ್ಕೆ ಹೋಗಿದ್ದಾಗ ನಾಗರಹಾವುಗಳು ಪ್ರಣಯದಲ್ಲಿ ತೊಡಗಿಕೊಂಡಿದ್ದ ದೃಶ್ಯ ನೋಡಿದ್ದರು.
ಇದರ ದೋಷ ನಿವಾರಣೆಗೆಂದು ಸಂಬಂಧಿಕರಿಗೆ ಕೆಟ್ಟ ಸುದ್ದಿ ಕಳುಹಿಸಬೇಕೆಂಬ ಹಿನ್ನೆಲೆಯಲ್ಲಿ ಗೋಣೆಪ್ಪನ ಪಕ್ಕದ ಮನೆಗೆ ಈಕೆ ಸತ್ತಿರುವುದಾಗಿ ದೂರವಾಣಿ ಮೂಲಕ ಸುದ್ದಿ ತಿಳಿಸಲಾಗಿತ್ತು. ಪೂರ್ಣ ವಿಷಯ ತಿಳಿಯುವುದಾಗಿ ಗೋಣೆಪ್ಪ ಅವರ ಹೆಂಡತಿ ನೀಲಮ್ಮ ಪಕ್ಕದ ಮನೆಗೆ ಹೋಗಿದ್ದರು.
ವಿವರವನ್ನು ಗಂಡನಿಗೆ ತಿಳಿಸಲು ಮನೆಗೆ ಬರುವಷ್ಟರಲ್ಲಿ ಅನಾಹುತ ನಡೆದು ಹೋಗಿತ್ತು. ತಂಗಿಯ ಸಾವಿನ ಸುದ್ದಿ ಅರಗಿಸಿಕೊಳ್ಳಲು ಆಗದೆ ಗೋಣೆಪ್ಪ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.












Click it and Unblock the Notifications