ಬಳ್ಳಾರಿ ನೆಲ ನುಣ್ಣಗೆ ಬೋಳಿಸಿದ ಸಂಕೇತ : ಕುಮ್ಮಿ
ಬೆಂಗಳೂರು/ಬಳ್ಳಾರಿ,
ಜು.30:ರೆಡ್ಡಿಗಳು ಪಾದಯಾತ್ರೆಯಲ್ಲೂ ಅಕ್ರಮ ತೋರಿಸಿದ್ದಾರೆ.ರೆಡ್ಡಿ ಸೋದರರು ತಾವು ತಲೆ ಬೋಳಿಸಿಕೊಳ್ಳದೆ ಶ್ರೀರಾಮುಲು ತಲೆ ಬೋಳಿಸಿದ್ದಾರೆ. ತಲೆ ಬೋಳಿಸುವುದರ ಮೂಲಕ ಬಳ್ಳಾರಿ ಅಕ್ರಮ ಗಣಿಗಾರಿಕೆ ಮೂಲಕ ಎಲ್ಲಾ ನೆಲವನ್ನು ಸಂಪೂರ್ಣ ನುಣ್ಣಗೆ ಮಾಡಿದ್ದೇವೆ ಎಂಬ ಸಂಕೇತ ಹೊರಡಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ. id="toptextpromo">ವಿರೋಧ
ಪಕ್ಷದ ನಾಯಕ ಗಾಂಭೀರ್ಯತೆ ಮರೆತು ವಿಧಾನಸೌಧದಲ್ಲಿ ಮಾಂಸ ತಿಂದು , ರಸ್ತೆಯಲ್ಲಿ ಕುಣಿಯುವುದಕ್ಕಿಂತ ತಲೆ ಬೋಳಿಸಿಕೊಳ್ಳುವುದು ಉತ್ತಮ ಕಾರ್ಯ. ಶ್ರೀರಾಮುಲು ಅವರು ನಿಷ್ಠಾವಂತ ಕಾರ್ಯಕರ್ತ, ಪಕ್ಷದ ಹಿತದೃಷ್ಟಿಗಾಗಿ ಸದಾ ಸ್ಪಂದಿಸುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬಳ್ಳಾರಿಯಲ್ಲಿ
ಶ್ರೀರಾಮುಲು ಅವರ ಬಿಜೆಪಿ ಸ್ವಾಭಿಮಾನ ಯಾತ್ರೆ ಇಂದು ಸಾಂಗವಾಗಿ ಶಿರಗುಪ್ಪವರೆಗೂ ಸಾಗಿದೆ. ಶ್ರೀರಾಮುಲು ಅವರಿಗೆ ಹೆಂಗಳೆಯರು ಆರತಿ ಎತ್ತಿ ಶುಭಕೋರಿದರು. ಕೇಶಮುಂಡನ ಮಾಡಿಕೊಂಡು, ಕಪ್ಪು ಬಟ್ಟೆ ಧರಿಸಿ ಹಿಂಬಾಲಕರಲ್ಲದೆ, ಸಾವಿರಾರು ಸಂಖ್ಯೆಯಲ್ಲಿ ಜನರು ಈ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.











Click it and Unblock the Notifications