ತ್ವರಿತ ಅಲರ್ಟ್ ಗಳಿಗಾಗಿ
For Daily Alerts

ಋಷಿ ಪತ್ನಿ ಅಹಲ್ಯೆಯದ್ದು ಫಸ್ಟ್ ಸೆಕ್ಸ್ ಸ್ಕ್ಯಾಂಡಲ್
ರಾಮನಗರ, ಜು. 26 : ಗುರುಪೂರ್ಣಿಮೆ ಅಂಗವಾಗಿ ಸೇರಿದ್ದ ಭಕ್ತರಿಗೆ ಪ್ರವಚನ ನೀಡಿದ ನಿತ್ಯಾನಂದ ಹೊಸ ವಿವಾದವನ್ನು ಮೈಮೇಲೆಳೆದುಕೊಂಡಿದ್ದಾರೆ. ಗೌತಮ ಋಷಿಗಳ ಪತ್ನಿ ಸಾಧ್ವಿ ಅಹಲ್ಯೆಯ ಅನುಪಮ ಸೌಂದರ್ಯಕ್ಕೆ ಬೆರಗಾದ ಇಂದ್ರ ಆಕೆಯ ಪ್ರಾತಿವೃತೆಯನ್ನು ಭಂಗಮಾಡಿದ ಪುರಾಣ ಕತೆಯನ್ನು ಉದಾಹರಿಸಿ ಅಹಲ್ಯೆಯದ್ದು ಪ್ರಥಮ ಸೆಕ್ಸ್ ಸ್ಕ್ಯಾಂಡಲ್ ಎಂದು ಬಣ್ಣಿಸಿದ್ದಾರೆ.
ತಮ್ಮ ಆಶೀರ್ವಚನದುದ್ದಕ್ಕೂ ತಮ್ಮ ಲೈಂಗಿಕ ಹಗರಣನ್ನೇ ಹಿನ್ನೆಲೆಯಾಗಿಟ್ಟುಕೊಂಡವನಂತೆ ಮಾತನಾಡಿದ ಅವರು, ಜೀವನದಲ್ಲಿ ಎದುರಾಗುವ ಅನಿರೀಕ್ಷಿತ ಪ್ರಸಂಗಗಳು ತಾಳ್ಮೆ ಮತ್ತಿತರ ಸಂಗತಿಗಳನ್ನು ಮಾತನಾಡಿದರು. ಗುರುಪೂರ್ಣಿಮೆ ಸಂಬಂಧ ಸಮೀಪದ ಬಿಡದಿ ಧ್ಯಾನಪೀಠದಲ್ಲಿ ಏರ್ಪಡಿಸಲಾಗಿದ್ದ 21 ಅಡಿ ಎತ್ತರದ ಲಿಂಗ ಸೇರಿದಂತೆ 1008ಲಿಂಗಗಳಿಗೆ ಮಸ್ತಕಾಭೀಷೇಕ ಯಶಸ್ವಿಯಾಗಿ ನೆರವೇರಿತು.
ನಿತ್ಯಾನಂದನ ರಾಸಲೀಲೆ ಮರೆತಿರುವ ಭಕ್ತರು ಸಮೂಹ ಗುರಪೂರ್ಣಿಮೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಅಚ್ಚರಿಸ ವಿಷಯವಾಗಿತ್ತು. ಭವ್ಯವಾಗಿ ಶೃಂಗಾರಗೊಂಡಿದ್ದ ಪಲ್ಲಕ್ಕಿಯಲ್ಲಿ ನಿತ್ಯಾನಂದರನ್ನು ಕೂರಿಸಿ ಭಕ್ತರು ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಕೆಲವರು ವಿಚಿತ್ರವಾಗಿ ನೃತ್ಯ ಮಾಡಿದ್ದೂ ನಡೆಯಿತು. ಆಶ್ರಮ ವಾಸಿಗಳು ನಿತ್ಯಾನಂದನಿಗೆ ಪಂಚಾರತಿ ಎತ್ತಿದರೆ ಹಿರಿಯ ಭಕ್ತರು ನಿತ್ಯಾನಂದ ಪಾದ ಪೂಜೆ ನೆರವೇರಿಸಿದರು.
Comments
ಸ್ವಾಮಿ ನಿತ್ಯಾನಂದ ರಾಸಲೀಲೆ ಬಿಡದಿ ದೌರ್ಜನ್ಯ ಲೈಂಗಿಕ ಹಗರಣ ರಂಜಿತಾ sex scandal bidadi guru purnima ranjitha bangalore
Story first published: Monday, July 26, 2010, 19:09 [IST]