ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ಕಾಂಗ್ರೆಸ್ ಪಕ್ಷದ ಅಂತಿಮ ಯಾತ್ರೆ: ರೆಡ್ಡಿ

By * ರೋಹಿಣಿ, ಬಳ್ಳಾರಿ
|
Google Oneindia Kannada News

Somashekar Reddy
ಬಳ್ಳಾರಿ,ಜು.26: ಕಾಂಗ್ರೆಸ್ ಇಂದು ಆರಂಭಿಸಿರುವ ಪಾದಯಾತ್ರೆ ಆ ಪಕ್ಷದ ಕೊನೆಯ ಯಾತ್ರೆ' ಎಂದು ಕೆಎಂಎಫ್ ಅಧ್ಯಕ್ಷ, ಶಾಸಕ ಜಿ. ಸೋಮಶೇಖರರೆಡ್ಡಿ ಅವರು ವ್ಯಂಗ್ಯವಾಡಿದ್ದಾರೆ.

ಬಳ್ಳಾರಿಯಲ್ಲಿ ಎಸ್ಸಿ - ಎಸ್ಟಿ ಮೆಟ್ರಿಕ್ ಬಾಲಕರ ವಸತಿನಿಯಲವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ರಾಜ್ಯದಲ್ಲಿ ಧೂಳೀಪಟ ಆಗಿದೆ. ಪಕ್ಷ ತನ್ನ ಅಸ್ತಿತ್ವ ಮತ್ತು ನೆಲೆಯನ್ನು ಪಡೆಯಲಿಕ್ಕಾಗಿಯೇ ಈ ಯಾತ್ರೆಯನ್ನು ನಡೆಸುತ್ತಿದೆ. ಇದೇ ಆ ಪಕ್ಷದ ಕೊನೆಯ ಯಾತ್ರೆ ಎಂದರು.

ನಾವು ಯಾವ ಯಾತ್ರೆಗೂ ಅಡ್ಡಿಪಡಿಸುವುದಿಲ್ಲ. ಗಲಾಟೆಯನ್ನು ಮಾಡುವುದಿಲ್ಲ. ನಾವು ಬಳ್ಳಾರಿಯವರು. ಶಾಂತಿ ಸೌಹಾರ್ದತೆ ನಮ್ಮ ಸಂಸ್ಕೃತಿ. ಅತಿಥಿದೇವೋ ಭವಃ ನಮ್ಮ ಸಂಸ್ಕಾರ. ಕಾಂಗ್ರೆಸ್ಸಿಗರು ಅನಗತ್ಯವಾಗಿ ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

ಬಳ್ಳಾರಿ ಜಿಲ್ಲೆಯಲ್ಲಿ ಕಳೆದ 2 ವರ್ಷಗಳಿಂದ ಕ್ರೈಂ ಕಡಿಮೆ ಆಗಿದೆ. ಎಲ್ಲಾ ಹಂತದ ಚುನಾವಣೆಗಳು ಶಾಂತಿಯುತವಾಗಿ ನಡೆದಿವೆ. ಕಾಂಗ್ರೆಸ್ಸಿಗರೇ ಅನಗತ್ಯವಾಗಿ ಗೊಂದಲ ನಿರ್ಮಾಣ ಮಾಡುತ್ತಿದ್ದಾರೆ. ಅಭಿವೃದ್ಧಿ ಇಲ್ಲಿ ಆಡಳಿತದ ನಿತ್ಯದ ಮಂತ್ರವಾಗಿದೆ ಎಂದರು.
***
ನನ್ನ ತೇಜೋವಧೆಯನ್ನು ನಿಲ್ಲಿಸಿ: ಶ್ರೀರಾಮುಲು

'ನನ್ನ ತೇಜೋವಧೆಯನ್ನು ನಿಲ್ಲಿಸಿ. ನೀವು ನನ್ನ ಬಗ್ಗೆ ಅನಗತ್ಯವಾಗಿ ಬರೆಯುತ್ತಿದ್ದೀರಿ. ನಾನು ಜನಪರ ವ್ಯಕ್ತಿ. ಜನನಾಯಕ. ನನ್ನ ಚಾರಿತ್ರ್ಯವನ್ನು ಹಾಳು ಮಾಡಬೇಡಿ' ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ಪತ್ರಕರ್ತರಲ್ಲಿ ಮನವಿ ಮಾಡಿಕೊಂಡ ಅಪರೂಪದ ಘಟನೆ ಭಾನುವಾರ ನಡೆಯಿತು.

ನಾನು ಯಾರು? ಎಲ್ಲಿಂದ ಬಂದೆ? ಹೇಗೆ ಈ ಹಂತಕ್ಕೆ ಬೆಳೆದುಬಂದೆ? ಎನ್ನುವ ಪ್ರಶ್ನೆಗಳಿಗೆ ಈಗ ಉತ್ತರ ಹುಡುಕುವ ಅಗತ್ಯವೇ ಇಲ್ಲ. ನಾನು ಮತ್ತು ನನ್ನ ಬಗ್ಗೆ ಜಿಲ್ಲೆಯ ಜನತೆಗೆ ಉತ್ತಮ ಮಾಹಿತಿ ಇದೆ. ನನ್ನ ರಾಜಕೀಯ ಜೀವನದ ಸ್ಪಷ್ಟ ಚಿತ್ರಣ ಜನರಲ್ಲಿ ಇದೆ. ನೀವು ನನ್ನ ತೇಜೋವಧೆ ಮಾಡಬೇಡಿ ಪ್ಲೀಸ್ ಎಂದು ಪತ್ರಕರ್ತರಲ್ಲಿ ಮನವಿ ಮಾಡಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X