ತಿರುಮಲದಲ್ಲಿ ಬಹುಕೋಟಿ ವೆಚ್ಚದ ಅತಿಥಿಗೃಹ

ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರ ಗೌಡ, ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ, ಮುಜರಾಯಿ ಮಂಡಳಿ ಅಧ್ಯಕ್ಷ ಎಸ್.ಎನ್. ಕೃಷ್ಣಯ್ಯ ಶೆಟ್ಟಿ, ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿಗಳು, ಇತರ ಹಿರಿಯ ಅಧಿಕಾರಿಗಳು, ಟಿಟಿಯ ಮುಖ್ಯ ಎಂಜಿನಿಯರ್ ಮೊದಲಾದವರು ಈ ಸಭೆಯಲ್ಲಿ ಭಾಗವಹಿಸಿದ್ದರು.
ಕೆಲವು ಸಣ್ಣ ಬದಲಾವಣೆಗಳೊಂದಿಗೆ ಈ ಯೋಜನೆಗೆ ಮಂಜೂರಾತಿ ನೀಡುವಂತೆ ಟಿಟಿಡಿ ಅಧ್ಯಕ್ಷ ಆದಿಕೇಶವುಲು ಅವರು ಟಿಟಿಡಿ ಮುಖ್ಯ ಅಭಿಯಂತರರಿಗೆ ಸೂಚಿಸಿದರು.
ಟಿಟಿಡಿ ಪಂಚಾಯತ್ ಕಚೇರಿಯು ರಾಜ್ಯ ಮುಜರಾಯಿ ಇಲಾಖೆಗೆ 2007ರಲ್ಲಿ 7.5 ಎಕರೆ ಭೂಮಿಯನ್ನು ತಿರುಮಲದಲ್ಲಿ 50 ವರ್ಷಗಳ ಅವಧಿಗೆ ಭೋಗ್ಯಕ್ಕೆ ನೀಡಿದ್ದು, ಇಲ್ಲಿ ಸುಸಜ್ಜಿತವಾಗದ ಅತಿಥಿಗೃಹ ನಿರ್ಮಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ. ಮೂರು ಬ್ಲಾಕ್‌ಗಳ ಈ ಅತಿಥಿಗೃಹದಲ್ಲಿ ಬ್ಲಾಕ್ ಎನಲ್ಲಿ 4 ಮಹಡಿಗಳಲ್ಲಿ 500 ಕೊಠಡಿಗಳನ್ನು ನಿರ್ಮಿಸಲಾಗುವುದು. ಬಿ-ಬ್ಲಾಕ್‌ನಲ್ಲಿ 22 ವಿಐಪಿ ಮತ್ತು 8 ವಿವಿಐಪಿ ಕೊಠಡಿಗಳು ಹಾಗೂ ಬ್ಲಾಕ್ ಸಿಯಲ್ಲಿ 16 ಮಳಿಗೆಗಳು, ಎರಡು ಉಪಾಹಾರ ಗೃಹಗಳು, ಒಂದು ಕಲ್ಯಾಣ ಮಂಟಪ ಹಾಗೂ ಎರಡು ಡಾರ್ಮಿಟರಿಗಳ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.












Click it and Unblock the Notifications