ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಲ್ಯಾಕ್ ಬಾಕ್ಸ್ ಜನಕ ಡೇವಿಡ್ ವಾರೆನ್ ಇನ್ನಿಲ್ಲ

By Mrutyunjaya Kalmat
|
Google Oneindia Kannada News

Black Box
ಸಿಡ್ನಿ, ಜು. 22 : ವಿಮಾನ ಅಪಘಾತದ ಕಾರಣಗಳ ಬಗ್ಗೆ ಮಹತ್ವದ ಮಾಹಿತಿ ಒದಗಿಸುವ ಬ್ಲ್ಯಾಕ್ ಬಾಕ್ಸ್ ಮಷೀನ್ ಸಂಶೋಧಕ ಡೇವಿಡ್ (85) ನಿಧನರಾಗಿದ್ದಾರೆ.

1953ರಲ್ಲಿ ಕಾಮೆಟ್ ಜೆಟ್ ವಿಮಾನ ಅಪಘಾತಕ್ಕೀಡಾದ ಸಂದರ್ಭದಲ್ಲಿ ಆ ಕುರಿತು ತನಿಖೆ ನಡೆಸಿದವರಲ್ಲಿ ಡೇವಿಡ್ ವಾರನ್ ಇದ್ದರು. ಮೂಲತಃ ವೈಮಾನಿಕ ಸಂಶೋಧಕರಾದ ಅವರಿಗೆ ತನಿಖೆಯ ಹಂತದಲ್ಲಿ ಕಾಕ್ ಪಿಟ್ ಧ್ವನಿ ಹಾಗೂ ವಿವಿಧ ಅಂಶಗಳ ದಾಖಲಾತಿ ವ್ಯವಸ್ಥೆ ಅಪಘಾತದ ಕಾರಣವನ್ನು ನಿಖರವಾಗಿ ಪತ್ತೆ ಹಚ್ಚಲು ಅನುಕೂಲ ಎಂದು ಅನ್ನಿಸಿತು. ಅಲ್ಲದೇ ಅದಕ್ಕೆ ಪೂರಕವಾದ ಉಪಕರಣವೊಂದನ್ನು ಅಭಿವೃದ್ಧಿಪಡಿಸಬೇಕು ಎಂಬ ಯೋಚನೆ ಮೂಡಿದ್ದರಿಂದ ಬ್ಲ್ಯಾಕ್ ಬಾಕ್ಸ್ ಉಪಕರಣ ಶೋಧಿಸಲಾಯಿತು.

ಪ್ರಯೋಗಾರ್ಥವಾಗಿ ಕಪ್ಪು ಪೆಟ್ಟಿಗೆ ಸಿದ್ಧಗೊಂಡ 10 ವರ್ಷಗಳ ನಂತರವೂ ಆಸ್ಟ್ರೇಲಿಯಾ ಸರಕಾರ ಆ ಬಗ್ಗೆ ಯಾವ ಆಸಕ್ತಿಯನ್ನೂ ತೋರಲಿಲ್ಲ. ಆದರೆ, ಅದರ ಮಹತ್ವವನ್ನು ನಿಧಾನವಾಗಿ ಮನಗಂಡ ಸರಕಾರ ಅನಂತರ ವಿಮಾನಗಳಲ್ಲಿ ಅದರ ಅಳವಡಿಕೆಯನ್ನು ಕಡ್ಡಾಯಗೊಳಿಸಬೇಕು ಎಂಬು ಆದೇಶ ಹೊರಡಿಸಿತ್ತು. ವಿಮಾನ ಅಪಘಾತದಲ್ಲಿ ಬ್ಲ್ಯಾಕ್ ಬಾಕ್ಸ್ ನ ಪಾತ್ರ ಎಷ್ಟೂ ಪ್ರಾಮುಖ್ಯತೆ ಪಡೆದುಕೊಂಡಿದೆ ಎನ್ನುವುದು ಇತಿಹಾಸವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X