ನಟಿ ರಂಜಿತಾ ನನ್ನ ಪರಮಭಕ್ತೆ : ನಿತ್ಯಾನಂದ

Swami Nithyananda
ಬೆಂಗಳೂರು, ಜು. 22 : ರಾಸಲೀಲೆ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದ ಬಿಡದಿಯ ಧ್ಯಾನಪೀಠಂನ ಸ್ವಾಮಿ ನಿತ್ಯಾನಂದ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ತಮಿಳು ನಟಿ ರಂಜಿತಾ ನನ್ನ ಪರಮ ಭಕ್ತೆ. ಅಮಾಯಕ ಹೆಣ್ಣುಮಗಳು ಬೇರೆ. ಕೆಲವರು ಮಾಡಿದ ಸಂಚಿನಿಂದಾಗಿ ಆಕೆಗೆ ತೀವ್ರ ನೋವುಂಟು ಮಾಡಲಾಗಿದೆ ಎಂದು ನಿತ್ಯಾನಂದ ಹೇಳಿದ್ದಾನೆ.

ಆಶ್ರಮದ ಪ್ರವಚನದಲ್ಲಿ ಮಾತನಾಡುತ್ತಿದ್ದ ಅವರು, ನಿಜವಾಗಲೂ ನಟಿ ರಂಜಿತಾ ಮುಗ್ಧೆ ಎಂದಿದ್ದಾರೆ. ರಾಸಲೀಲೆ ಪ್ರಕರಣದಲ್ಲಿ ಆಕೆಯನ್ನು ವಿನಾಕಾರಣ ಆಕೆಯನ್ನು ಎಳೆದು ತರಲಾಯಿತು. ತಪ್ಪೆ ಮಾಡಿದ ಆಕೆಯನ್ನು ಹಗರಣದಲ್ಲಿ ಸಿಲುಕಿಸಲಾಯಿತು. ಇದರಿಂದ ಆಕೆಗೆ ಮತ್ತು ಅವರ ಕುಟುಂಬ ವರ್ಗದವರಿಗೆ ತೀವ್ರ ನೋವುಂಟು ಮಾಡಲಾಯಿತು ಎಂದು ನಿತ್ಯಾನಂದ ಸ್ವಾಮಿ ವಿಷಾಧ ವ್ಯಕ್ತಪಡಿಸಿದ್ದಾರೆ.

ರಾಸಲೀಲೆ ಪ್ರಕರಣದಿಂದ ಬಗ್ಗೆ ನನಗೆ ಖೇದವಿಲ್ಲ. ನನ್ನ ಮೇಲೆ ಸೇಡು ತೀರಿಸಿಕೊಳ್ಳಲು ಕೆಲವರು ನಡೆಸಿದ ಷಡ್ಯಂತ್ರ. ನನ್ನನ್ನು ಹಗರಣದಲ್ಲಿ ಸಿಲುಕಿಸಿದ್ದರಲ್ಲಿ ನನಗೆ ಯಾವುದೇ ನೋವಾಗಲಿ, ಪಶ್ಚಾತಾಪವಾಗಲಿ ಇಲ್ಲ. ಆದರೆ, ಒಬ್ಬ ನಟಿಯ ಜೀವನ ಜೊತೆ ಕೆಲವರು ಆಟವಾಡಿದ್ದು ಎಷ್ಟರ ಮಟ್ಟಿಗೆ ಸರಿ. ರಂಜಿತಾ ಅನುಭವಿಸಿದ ನೋವು, ಅವಮಾನ ಇವರಿಗೆ ಅರ್ಥವಾಗುತ್ತದೆಯೇ ಎಂದು ನಿತ್ಯಾನಂದ ಪ್ರಶ್ನಿಸಿದ್ದಾನೆ.

ರಾಸಲೀಲೆ ಹಗರಣವಾದ ಬಹುದಿನಗಳ ನಂತರ ಮೌನ ಮುರಿದಿದ್ದ ನಟಿ ರಂಜಿತಾ, ಸ್ವಾಮಿ ನಿತ್ಯಾನಂದ ರಾಸಲೀಲೆ ಪ್ರಕರಣ ಸೇರಿದಂತೆ ನನ್ನ ಜೀವನದಲ್ಲಿ ನಡೆದ ಪ್ರಮುಖ ಘಟನೆಗಳ ಬಗ್ಗೆ ಪುಸ್ತಕವನ್ನು ಬರೆಯುವುದಾಗಿ ಘೋಷಣೆ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+