ಮಾರುಕಟ್ಟೆ ಮೌಲ್ಯದಲ್ಲಿ ಇನ್ಫಿಯನ್ನು ಹಿಂದಿಕ್ಕಿದ ಟಿಸಿಎಸ್

ಉತ್ತಮ ತ್ರೈಮಾಸಿಕ ಫಲಿತಾಂಶದ ಹಿನ್ನೆಲೆಯಲ್ಲಿ ಶುಕ್ರವಾರ ಮುಂಬೈ ಶೇರು ಪೇಟೆಯಲ್ಲಿ ಟಿಸಿಎಸ್ ನ ಶೇರುಗಳ ದರ ಶೇ.6 ಏರಿಕೆ ದಾಖಲಿಸಿದ್ದು ಒಟ್ಟು ಮಾರುಕಟ್ಟೆ ಮೌಲ್ಯ 1.62 ಲಕ್ಷ ಕೋಟಿ ರುಪಾಯಿಗಳಿಗೇರಿದೆ.
ಇನ್ಫೋಸಿಸ್ ನ ಮಾರುಕಟ್ಟೆ ಮೌಲ್ಯ 1.59 ಲಕ್ಷ ಕೋಟಿ ರುಪಾಯಿಗಳಾಗಿವೆ. ಈಗ ದೇಶದ ನಾಲ್ಕನೇ ಅತೀ ದೊಡ್ಡ ಕಂಪೆನಿಯಾಗಿ ಟಿಸಿಎಸ್ ಹೊರಹೊಮ್ಮಿದೆ. ಕೋಟ್ಯಾದಿಪತಿ ಮುಖೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಇಂಡಸ್ಟ್ರೀಸ್ ದೇಶದ ಅತೀ ದೊಡ್ಡ ಕಂಪೆನಿಯಾಗಿದ್ದು ಇದರ ಮಾರುಕಟ್ಟೆ ಮೌಲ್ಯ ಶುಕ್ರವಾರಕ್ಕೆ 3.47 ಲಕ್ಷ ಕೋಟಿ ರೂಪಾಯಿಗಳಾಗಿವೆ.
ಎರಡನೇ ಸ್ಥಾನದಲ್ಲಿ ಸರ್ಕಾರಿ ಸ್ವಾಮ್ಯದ ಒಎನ್ ಜಿಸಿ ಹಾಗೂ ಎನ್ ಟಿಪಿಸಿ ಮೂರನೇ ಸ್ಥಾನದಲ್ಲಿ ಇವೆ. ನಾಲ್ಕನೇ ಸ್ಥಾನದಲ್ಲಿದ್ದ ಇನ್ಫೋಸಿಸ್ ಈಗ ಟಿಸಿಎಸ್ ಗೆ ಆ ಸ್ಥಾನವನ್ನು ಬಿಟ್ಟುಕೊಟ್ಟು 5ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಟಿಸಿಎಸ್ ನ ತ್ರೈಮಾಸಿಕ ಲಾಭ ಶೇ.24ರಷ್ಟು ಹೆಚ್ಚಾಗಿದ್ದು 1906ಕೋಟಿ ರೂಪಾಯಿಗಳಿಗೇರಿದೆ.











Click it and Unblock the Notifications