ಸೆಂಟ್ರಲ್ ಜೈಲ್ ಗೆ ಶ್ರೀರಾಮುಲು ರಹಸ್ಯ ಭೇಟಿ !!
ಬೆಂಗಳೂರು
ಜು 16 : ಆರೋಗ್ಯ ಸಚಿವ ಶ್ರೀರಾಮುಲು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ತೆರಳಿ ಕೆಲ ಕೈದಿಗಳೊಂದಿಗೆ ಮೂರು ತಾಸುಗಳ ಸುದೀರ್ಘ ಮಾತುಕತೆ ನಡೆಸಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಯಾವುದೇ ಮುನ್ಸೂಚನೆ ಇಲ್ಲದೆ ಶ್ರೀರಾಮುಲು ಬುಧವಾರ ಸುಮಾರು ಎರಡು ಗಂಟೆಯ ಸುಮಾರಿಗೆ ಜೈಲಿಗೆ ಭೇಟಿ ನೀಡಿದ್ದರು. id="toptextpromo">ಬಳ್ಳಾರಿ
ಮತ್ತು ಸುತ್ತಮುತ್ತಲಿನ ಪ್ರದೇಶದ ಖೈದಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ಕರೆಸಿ ಶ್ರೀರಾಮುಲು ಮಾತುಕತೆ ನಡೆಸಿದ್ದಾರೆ. ಸಚಿವರೊಂದಿಗೆ ಜಿಲ್ಲೆಯ ಇತರ ನಾಲ್ವರು ಶಾಸಕರೂ ಹಾಜರಿದ್ದರು. ಖೈದಿಗಳ ಜೊತೆ ಸಚಿವರು ಮಾತನಾಡುತ್ತಿದ್ದ ವೇಳೆ ಕಾರಾಗೃಹದ ಅಧಿಕಾರಿಗಳನ್ನು ಹೊರಗೆ ಕಳುಹಿಸಲಾಗಿತ್ತು. ಸಚಿವರು ಭೇಟಿ ನೀಡುವುದು ಪೋಲೀಸ್ ಅಧಿಕಾರಿಗಳಿಗೂ ತಿಳಿದಿರಲಿಲ್ಲ. id='are-slot-1' class='oiad oi-axt oiadv'> id='top-searched-articles'>ಈ
ಕೆಲ ಖೈದಿಗಳ ಜೊತೆ ಮಾತುಕತೆಯ ನಂತರ ಸಚಿವರು ಮತ್ತು ಶಾಸಕರು ಇತರ ಖೈದಿಗಳ ಕೊಠಡಿಗೆ ತೆರಳಿ ಜೈಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ನಂತರ ಜೈಲಿನ ಆಸ್ಪತ್ರೆಗೆ ತೆರಳಿ ವೈದ್ಯಕೀಯ ಸಿಬ್ಬಂದಿಗಳ ಜೊತೆ ಮಾತುಕತೆ ನಡೆಸಿದ್ದಾರೆ.











Click it and Unblock the Notifications