ಇನ್ಫೋಸಿಸ್ ತ್ರೈಮಾಸಿಕ ಲಾಭದಲ್ಲಿ ಶೇ 2.6 ಕುಸಿತ

ಈ ತ್ರೈಮಾಸಿಕದಲ್ಲಿ ಕಂಪೆನಿ1,488 ಕೋಟಿ ರೂಪಾಯಿಗಳ ಆದಾಯ ಗಳಿಸಿದ್ದರೆ ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ 1,525 ಕೋಟಿ ರೂಪಾಯಿಗಳ ಆದಾಯ ಗಳಿಸಿತ್ತು. ಆದರೆ ವಿದೇಶಿ ಗ್ರಾಹಕರು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಾರ್ಷಿಕ ಲಾಭ ಹೆಚ್ಚಲಿರುವುದಾಗಿ ಕಂಪೆನಿ ಅಂದಾಜಿಸಿದೆ.
ಕಳೆದ ಏಪ್ರಿಲ್ ಜೂನ್ ತ್ರೈಮಾಸಿಕದಲ್ಲಿ ಕಂಪೆನಿ 1,026 ಹೊಸ ನೌಕರರನ್ನು ಸೇರ್ಪಡೆ ಮಾಡಿಕೊಂಡಿದೆ. ಜಾಗತಿಕ ಕಂಪೆನಿಗಳಾದ ಗೋಲ್ಡ್ ಮನ್ ಸ್ಯಾಕ್ಸ್, ಬಿ ಟಿ ಸಮೂಹ ಹಾಗೂ ಬಿಪಿ ಕಂಪೆನಿಗಳನ್ನು ಗ್ರಾಹಕರನ್ನಾಗಿ ಹೊಂದಿರುವ ಇನ್ಫೋಸಿಸ್ 550 ವಿದೇಶಿ ಗ್ರಾಹಕರನ್ನೂ ಹೊಂದಿದೆ.
2010-11ನೇ ಸಾಲಿನಲ್ಲಿ ಕಂಪೆನಿಯ ಲಾಭ ಡಾಲರ್ ಲೆಕ್ಕದಲ್ಲಿ ಶೇ19 ರಿಂದ ಶೇ 21 ರಷ್ಟು ಹೆಚ್ಚಲಿರುವುದಾಗಿ ಕಂಪೆನಿ ಅಂದಾಜಿಸಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಕಂಪೆನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್ ಗೋಪಾಲ ಕೃಷ್ಣನ್ ಅವರು ಜಾಗತಿಕ ಆರ್ಥಿಕ ಪರಿಸರದಲ್ಲಿ ಅನಿಶ್ಚಿತತೆ ಇದ್ದರೂ ಕಂಪೆನಿಯ ಸೇವೆಗಳಿಗೆ ಉತ್ತಮ ಬೇಡಿಕೆ ಬರುತ್ತಿದೆ ಎಂದರು.
ಈಗ ಉದ್ಯಮಕ್ಕೆ ವಹಿವಾಟು ಹೆಚ್ಚಿಸಲು ಹೂಡಿಕೆ ಹೆಚ್ಚಿಸುವುದೊಂದು ಸವಾಲಾಗಿದೆ ಎಂದು ಅವರು ಹೇಳಿದರು. ಕಂಪೆನಿ ಅಮೆರಿಕದ ಡೆಪಾಸಿಟರಿ ರಿಸೀಟ್ಸ್ ಗಳಿಂದ ಆದಾಯ ಶೇ.5.2 ರಿಂದ ಶೇ 9.6 ಕ್ಕೇರಲಿದೆ ಎಂದು ಅಂದಾಜಿಸಿದೆ. ಇನ್ಫೋಸಿಸ್ ನ ಶೇರುಗಳು ಇಂದು ತ್ರೈಮಾಸಿಕ ಫಲಿತಾಂಶದ ನಂತರ ಶೇ2.1 ರಷ್ಟು ಕುಸಿತ ದಾಖಲಿಸಿದವು.
ಇನ್ಫೋಸಿಸ್ ಮತ್ತು ಇತರ ಪ್ರತಿದ್ವಂದ್ವಿ ಕಂಪೆನಿಗಳಾದ ಟಿಸಿಎಸ್ ಹಾಗೂ ವಿಪ್ರೋ ನೌಕರರ ಸಂಖ್ಯೆಯನ್ನು ಹೆಚ್ಚಿಸುತ್ತಿದ್ದು ಸಿಬ್ಬಂದಿಗಳ ಸಂಬಳವನ್ನು ಶೇ10 ರಿಂದ 20 ರಷ್ಟು ಹೆಚ್ಚಿಸಿವೆ. 2011ರಲ್ಲಿ ಇನ್ಫೋಸಿಸ್ 36,000 ನೌಕರರ ನೇಮಕ ಮಾಡಿಕೊಳ್ಳಲಿದೆ ಎಂದು ಗೋಪಾಲ ಕೃಷ್ಣನ್ ತಿಳಿಸಿದರು.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications