ಸಂಬಂಧಿಯಿಂದಲೇ ಗೃಹಿಣಿ ಅತ್ಯಾಚಾರ, ಕೊಲೆ
ಬೆಂಗಳೂರು,
ಜು. 12 : ಸಂಬಂಧಿಯೇ ಗೃಹಿಣಿ ಮೇಲೆ ಅತ್ಯಾಚಾರ ಎಸಗಿ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಸುಬ್ರಮಣ್ಯಪುರ ಠಾಣೆಯ ಉತ್ತರಹಳ್ಳಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಸೋಮಮ್ಮ(55) ಹತ್ಯೆಯಾದ ನತದೃಷ್ಟ ಮಹಿಳೆ. id="toptextpromo">ಮಂಜುನಾಥ(30)
ಕೊಲೆ ಮಾಡಿ ಪರಾರಿಯಾಗಿರುವ ಆರೋಪಿ. ಸೋಮಮ್ಮ ಅವರ ಮಗ ಹೊನ್ನಲಿಂಗೇಗೌಡ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸೋಮಮ್ಮ ಅವರ ದೂರದ ಸಂಬಂಧಿಯಾದ ಮಂಜುನಾಥ, ನಗರದ ಹೋಟೆಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಮಂಜುನಾಥ ಶನಿವಾರ ಅವಿನ್ಯೂ ರಸ್ತೆಯಲ್ಲಿ ಹೊನ್ನಲಿಂಗೇಗೌಡನನ್ನು ಭೇಟಿಯಾಗಿ ವಿಳಾಸ ಪಡೆದು ಸಂಜೆ ಮನೆಗೆ ಆಗಮಿಸಿ ಈ ಕೃತ್ಯ ಎಸಗಿದ್ದಾನೆ. id='are-slot-1' class='oiad oi-axt oiadv'> id='top-searched-articles'>ಶನಿವಾರ
ಮನೆಗೆ ಬಂದ ಮಂಜುನಾಥ ರಾತ್ರಿ ಮನೆಯಲ್ಲೇ ತಂಗುವುದಾಗಿ ಹೇಳಿದ್ದಾನೆ. ಹೊನ್ನಲಿಂಗೇಗೌಡ ಅಟೋವನ್ನು ಬಾಡಿಗೆಗೆ ತೆಗೆದುಕೊಂಡು ಹೋದಾಗ ಮಂಜುನಾಥ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಕೊಲೆ ಮಾಡಿರುವ ಮಂಜುನಾಥ ಮಾನಸಿಕ ಅಸ್ವಸ್ಥನಾಗಿದ್ದ. ಆತನ ವರ್ತನೆ ಸರಿ ಇರಲಿಲ್ಲ. ಯುವತಿಯರೊಂದಿಗೆ ಅಶ್ಲೀಲವಾಗಿ ವರ್ತಿಸುತ್ತಿದ್ದ ಎಂದು ಹೋಟೆಲ್ ಸಿಬ್ಬಂದಿ ಹೇಳಿದ್ದಾರೆ.











Click it and Unblock the Notifications