ಹಾಲಿನ ದರ 1 ರುಪಾಯಿ ಇಳಿಕೆ
ತುಮಕೂರು, ಜು. 12 : ಗ್ರಾಮ ಪಂಚಾಯತಿ ಚುನಾವಣೆಗಳ ಸಂದರ್ಭದಲ್ಲಿ ಏರಿಕೆ ಮಾಡಿದ್ದ ಹಾಲಿನ ದರವನ್ನು ಕರ್ನಾಟಕ ಹಾಲು ಉತ್ಪಾದಕ ಮಹಾಮಂಡಳಿ ಇಳಿಕೆ ಮಾಡಿದೆ. ಹಾಲಿನ ದರವನ್ನು ಲೀಟರ್ ಗೆ 1 ರುಪಾಯಿ ಇಳಿಸುವಂತೆ ಸೂಚಿಸಿ ರಾಜ್ಯದ ಎಲ್ಲ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಕೆಎಂಎಫ್ ಸುತ್ತೋಲೆ ಹೊರಡಿಸಿದೆ.
ಹಾಲು ದರ ಏರಿಕೆಗೆ ಭಾರಿ ಪ್ರಚಾರ ನೀಡಿದ್ದ ಸರಕಾರ, ದರ ಇಳಿಕೆಗೆ ಯಾವುದೇ ಪ್ರಚಾರ ನೀಡದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಹಾಲಿನ ದರ ಹೆಚ್ಚಳದಿಂದ ರೈತರ ಹೈನುಗಾರಿಕೆಗೆ ಒತ್ತು ನೀಡಿದ್ದು, ಈಗ ಅದಕ್ಕೆ ಹೊಡೆತ ಬಿದ್ದಂತಾಗಿದೆ.
ಎರಡು ತಿಂಗಳ ಹಿಂದೆ ಹಾಲು ಮಾರಾಟ ದರವನ್ನು ಲೀಟರ್ ಗೆ 2 ರುಪಾಯಿ ಹೆಚ್ಚಿಸಲಾಗಿತ್ತು. ಇದರಲ್ಲಿ ರೈತರಿಗೆ 1.50 ರುಪಾಯಿ, 25 ಪೈಸೆ ಹಾಲು ಉತ್ಪಾದಕ ಮಹಾಮಂಡಳಿಗೆ, 25 ಪ್ರೋತ್ಸಾಹ ಧನ, 25 ಪೈಸೆ ನಿರ್ವಹಣೆ ವೆಚ್ಚ ಎಂದು ತಿಳಿಸಲಾಗಿತ್ತು. ಆದರೆ, ಗ್ರಾಮ ಪಂಚಾಯಿತಿ ಚುನಾವಣೆಗಳು ಮುಗಿಯುತ್ತಿದ್ದಂತೆ ಏಕಾಏಕಿ ದರ ಇಳಿಕೆ ಮಾಡಲಾಗಿದೆ.











Click it and Unblock the Notifications