ಜು.14ಕ್ಕೆ ಪೂರ್ಣಚಂದ್ರತೇಜಸ್ವಿ ಪ್ರಶಸ್ತಿ ಸಮಾರಂಭ
ಬೆಂಗಳೂರು,
ಜು.11: ಎಲ್ಲ ಕನ್ನಡಾಭಿಮಾನಿಗಳ ಅಂತಾರಾಷ್ಟ್ರೀಯ ವೇದಿಕೆ(ಈಕವಿ)ಯ 'ಈಕವಿ ಸಾಹಿತ್ಯ ಪ್ರಶಸ್ತಿಗೆ ಸಾಹಿತಿ ಲಕ್ಷ್ಮೀಪತಿ ಕೋಲಾರ ಹಾಗೂ 'ಪೂರ್ಣಚಂದ್ರ ತೇಜಸ್ವಿ' ಪ್ರಶಸ್ತಿಗೆ ಗಣಕ ತಜ್ಞ ಎನ್. ಅನ್ಬರಸನ್ ಅವರು ಆಯ್ಕೆಯಾಗಿದ್ದಾರೆ. id="toptextpromo">ಹಿರಿಯ
ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಇಬ್ಬರನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಜು.14 ರಂದು ಸಂಜೆ 6ಕ್ಕೆ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ನಡೆಯಲಿದೆ. id='are-slot-1' class='oiad oi-axt oiadv'> id='top-searched-articles'>ಸಚಿವ
ಬಸವರಾಜ ಬೊಮ್ಮಾಯಿ, ಡಾ.ಎಲ್. ಹನುಮಂತಯ್ಯ, ಡಾ.ಚಂದ್ರಶೇಖರ ಕಂಬಾರ, ಪ್ರೊ.ಎಲ್.ಎನ್. ಮುಕುಂದರಾಜ್ ಮುಖ್ಯ ಅತಿಥಿ ಗಳಾಗಿ ಭಾಗವಹಿಸಲಿದ್ದಾರೆ ಎಂದು ಈಕವಿ ಸಂಸ್ಥೆಯ ವಿ.ಎಂ. ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.











Click it and Unblock the Notifications