ಸ್ಪೇನ್ ಮಡಿಲಿಗೆ ಫೀಪಾ ವಿಶ್ವಕಪ್; ಮಕರ ಭವಿಷ್ಯ

'Psychic' Aussie Croc backs Paul, picks Spain
ಸಿಡ್ನಿ, ಜು.10: ಈ ಬಾರಿಯ ಫಿಪಾ ವಿಶ್ವಕಪ್ ನಲ್ಲಿ ಯಾವ ತಂಡ ಜಯಭೇರಿ ಬಾರಿಸುತ್ತದೆ ಎಂಬ ಬಗ್ಗೆ ಈಗಾಗಲೆ ಅಷ್ಟಪದಿ (ಅಕ್ಟೊಪಸ್) ಹಾಗೂ ಗಿಳಿಯೊಂದು ಭವಿಷ್ಯ ನುಡಿದಾಗಿದೆ. ಇದೀಗ ಈ ಸಾಲಿಗೆ ಹೊಸದಾಗಿ ಮೊಸಳೆಯೊಂದು ಸೇರ್ಪಡೆಯಾಗಿದೆ. ಅದರ ಪ್ರಕಾರ ಈ ಬಾರಿಯ ವಿಶ್ವಕಪ್ ಸ್ಪೇನ್ ಮಡಿಲಿಗೆ ಬೀಳಲಿದೆಯಂತೆ.

ಆಸ್ಟ್ರೇಲಿಯಾದ ಸಿಡ್ನಿಯಲ್ಲಿನ ಡಾರ್ವಿನ್ ಮೊಸಳೆ ಸಂರಕ್ಷಣಾ ಕೇಂದ್ರದ 'ಹ್ಯಾರಿ' ಎಂಬ ಮೊಸಳೆ ಫಿಪಾ ಬಗ್ಗೆ ಹೊಸದಾಗಿ ಭವಿಷ್ಯ ನುಡಿದಿದೆ. ಅದರ ಮುಂದೆ ಸ್ಪೇನ್, ನೆದರ್ ಲ್ಯಾಂಡ್ ರಾಷ್ಟ್ರಧ್ವಜಗಳ ಬಳಿ ಕೋಳಿ ಮಾಂಸವನ್ನು ಇಡಲಾಗಿ ಸ್ಪೈನ್ ಧ್ವಜದ ಮುಂದಿನ ಮಾಂಸವನ್ನು ಹ್ಯಾರಿ ಲಪಟಾಯಿಸಿದೆ.

ಇದರಿಂದ ಈ ಬಾರಿಯ ವಿಶ್ವಕಪ್ ಫುಟ್ ಬಾಲ್ ಚಾಂಪಿಯನ್ ಸ್ಪೇನ್ ಪಾಲಾಗಲಿದೆ ಎಂದು ಮೃಗಾಲಯದ ಮೇಲ್ವಿಚಾರಕರು ಅಭಿಪ್ರಾಯಪಟ್ಟಿದ್ದಾರೆ. ಜರ್ಮನಿಯಲ್ಲಿ 'ಪಾಲ್' ಎಂಬ ಅಕ್ಟೋಪಸ್ ಸಹ ಸ್ಪೈನ್ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿತ್ತು. ಸಿಂಗಪುರದ 'ಮಣಿ' ಎಂಬ ಗಿಳಿ ನೆದರ್ ಲ್ಯಾಂಡ್ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿತ್ತು.

ಅಷ್ಟಪದಿ ಹಾಗೂ ಮಕರ ಸ್ಪೇನ್ ಪರವಾಗಿ ಭವಿಷ್ಯ ನುಡಿದಿದ್ದರೆ ಗಿಳಿ ಮಾತ್ರ ನೆದರ್ ಲ್ಯಾಡ್ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದೆ. ವಿಶ್ವಕಪ್ ಅಂತಿಮ ಸಮರ ವಿಶ್ವದಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದು ಯಾರ ಜ್ಯೋತಿಷ್ಯ ನಿಜವಾಗಲಿದೆಯೇ ಕಾತುರ ಕುತೂಹಲ ಫುಟ್ ಬಾಲ್ ಪ್ರಿಯರಲ್ಲಿ ಮನೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+