ಚಿತ್ರದುರ್ಗ : ಗೃಹಸ್ಥಾಶ್ರಮ ಸೇರಿದ ಸನ್ಯಾಸಿನಿ
ಚಿತ್ರದುರ್ಗ/ಶಿರಸಿ,
ಜು. 6 : ಇಲ್ಲಿನ ಮುರುಘಾಮಠದ ಶಾಖಾ ಮಠದ ಸನ್ಯಾಸಿನಿಯೊಬ್ಬರು ಸನ್ಯಾಸತ್ವಕ್ಕೆ ಗುಡಬೈ ಹೇಳಿ ತನಗಿಂತ 10 ವರ್ಷ ಚಿಕ್ಕ ವಯಸ್ಸಿನ ಯುವಕನನ್ನು ಮದುವೆಯಾಗಿರುವ ಘಟನೆ ನಡೆದಿದೆ. ಆದರೆ, ಯುವಕ ತಾಯಿ ಸನ್ಯಾಸಿನಿಯೊಬ್ಬರು ತಮ್ಮ ಮಗನನ್ನು ಅಪಹರಿಸಿದ್ದಾರೆ ಎಂದು ದೂರು ನೀಡಿದ್ದಾರೆ. id="toptextpromo">ಶಿರಸಿ
ರುದ್ರದೇವರ ಮಠದ ಪೀಠಾಧ್ಯಕ್ಷೆ ನಿವೇದಿತಾ ಅಲಿಯಾಸ್ ನಂದಿತಾ(32) ಕಳೆದ ಮೂರು ವರ್ಷದಿಂದ ಪ್ರೀತಿಸುತ್ತಿದ್ದ ಚೇತನ್(22) ಅವರನ್ನು ವಿವಾಹವಾಗಿದ್ದಾರೆ. ಶಿವಮೂಗ್ಗದ ಗುಡ್ಡದ ಆಂಜನೇಯ ದೇವಸ್ಥಾನದಲ್ಲಿ ಸಪ್ತಪದಿ ತುಳಿದಿದ್ದಾರೆ. ನಿವೇದಿತಾ ಚನ್ನಗಿರಿ ತಾಲ್ಲೂಕಿನ ಬೆಂಕಿಕೆರೆ ಗ್ರಾಮದವರು. ಕಳೆದು ಐದು ವರ್ಷಗಳ ಹಿಂದೆ ಮುರುಘಾಮಠದ ಶಿವಮೂರ್ತಿ ಶರಣರ ಸಮ್ಮುಖದಲ್ಲಿ ಸನ್ಯಾಸತ್ವ ಪಡೆದುಕೊಂಡು, ಸಿರಸಿಯ ರುದ್ರದೇವರ ಮಠಕ್ಕೆ ಪೀಠಾಧ್ಯಕ್ಷರಾಗಿದ್ದರು. id='are-slot-1' class='oiad oi-axt oiadv'> id='top-searched-articles'>ನಾನು
ಇಷ್ಟಪಟ್ಟ ಮದುವೆಯಾಗಿರುವೆ. ಯಾರ ಒತ್ತಡವೂ ಇಲ್ಲ. ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದೇವು ಎಂದು ನೂತನ ದಂಪತಿಗಳು ಹೇಳಿದ್ದಾರೆ. ಆದರೆ, ಯುವಕನ ತಾಯಿ ಸನ್ಯಾಸಿನಿಯೊಬ್ಬರು ನನ್ನ ಮಗನನ್ನು ಅಪಹರಿಸಿದ್ದಾರೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವರ ಚೇತನ್ ಚಿತ್ರದುರ್ಗದ ಎಸ್ ಪಿ ರಸ್ತೆಯ ನಿವಾಸಿಯಾಗಿದ್ದಾನೆ. ಅತ್ತ ಸಿರಿಸಿಯ ರುದ್ರದೇವರ ಮಠಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.











Click it and Unblock the Notifications