ಲೋಕಾಯುಕ್ತರೆ ಟೀಕೆಗಳಿಗೆ ಕುಗ್ಗಬೇಡಿ : ದೇವೇಗೌಡ
ಬೆಂಗಳೂರು,
ಜು. 6 : ಟೀಕೆಗಳಿಗೆ ಎದೆಗುಂದದೆ ಭ್ರಷ್ಟಾಚಾರದ ವಿರುದ್ಧ ಹೋರಾಟದಲ್ಲಿ ಮುನ್ನಡೆಯುವಂತೆ ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆ ಅವರಿಗೆ ಮಾಜಿ ಪ್ರಧಾನಿ ದೇವೇಗೌಡ ಮನವಿ ಮಾಡಿದ್ದಾರೆ. id="toptextpromo">ಮಾಧ್ಯಮ
ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜೀನಾಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರು ನೀಡಿರುವ ಹೇಳಿಕೆ ನಿಮಗೆ ನೋವುಂಟು ಮಾಡಿದೆ ಎಂಬುದು ಗೊತ್ತಿದೆ. ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳುವುದು ಬೇಡ. ರಾಜ್ಯದ ಹಿತವನ್ನು ಗಮನದಲ್ಲಿಟ್ಟುಕೊಂಡು ಈ ಮನವಿ ಮಾಡಿರುವುದಾಗಿ ಗೌಡರು ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬಿಜೆಪಿ
ಹಿರಿಯ ನಾಯಕ ಅಡ್ವಾಣಿ ಅವರ ಮನವಿ ಮೇರೆಗೆ ರಾಜೀನಾಮೆ ಹಿಂದಕ್ಕೆ ಪಡೆದುಕೊಂಡೇ ಎಂದು ಲೋಕಾಯುಕ್ತರು ನೀಡಿರುವ ಹೇಳಿಕೆಯಲ್ಲಿ ತಪ್ಪಿಲ್ಲ. ಭ್ರಷ್ಟಾಚಾರದ ವಿರುದ್ದದ ಹೋರಾಟದಲ್ಲಿ ಎಲ್ಲರೂ ಕೈಜೋಡಿಸಬೇಕು. ಹಿರಿಯರಾದ ಆಡ್ವಾಣಿ ಅವರ ಬಗ್ಗೆ ವೈಯಕ್ತಿಕವಾಗಿ ಅಪಾರ ಗೌರವವಿದೆ. ಹಾಗೆಯೇ ಲೋಕಾಯುಕ್ತರು ಸಹ ಗೌರವಭಾವದಿಂದ ಮಾತನಾಡಿದ್ದಾರೆ. ಅದರಲ್ಲಿ ತಪ್ಪು ಹುಡುಕುವುದು ಬೇಡ ಎಂದು ಗೌಡರು ಅಭಿಪ್ರಾಯಪಟ್ಟಿದ್ದಾರೆ.











Click it and Unblock the Notifications