ಫೀಫಾ ವಿಶ್ವಕಪ್ 2010 ಯಾರು ಗೆಲ್ಲುತ್ತಾರೆ?
ಜೋಹಾನ್ಸ್ ಬರ್ಗ್, ಜು.5:ಫೀಫಾ ವಿಶ್ವಕಪ್ 2010 ಉಪಾಂತ್ಯ ಹಂತ ತಲುಪಿದ್ದು, ಅಭಿಮಾನಿಗಳು ಕಾತುರದಿಂದ ಮುಂದಿನ ಪಂದ್ಯಗಳನ್ನು ಎದುರು ನೋಡುತ್ತಿದ್ದಾರೆ. ಈಗ ಎಲ್ಲರೂಗೂ ವಿಶ್ವಕಪ್ ಗೆಲ್ಲುವ ತಂಡ ಯಾವುದು ಎಂಬ ಚರ್ಚೆಯಲ್ಲಿ ಮುಳುಗಿದ್ದಾರೆ.
ಬುಕ್ಕಿಗಳ ಫೇವರಿಟ್ ತಂಡಗಳಲ್ಲಿ ಸ್ಪೇನ್ ಹಾಗು ಜರ್ಮನಿ ಉಳಿದಿದ್ದು, ಅರ್ಜೆಂಟೀನಾ ಹಾಗೂ ಇಂಗ್ಲೆಂಡ್ ಮನೆ ಸೇರಿವೆ. ಜರ್ಮನಿಯ ಅದ್ಭುತ ಪ್ರದರ್ಶನದ ನಡುವೆಯೂ ಬುಕ್ಕಿಗಳು ಈಗಲೂ ಸ್ಪೇನ್ ಪ್ರಶಸ್ತಿ ಗೆಲ್ಲುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಆದರೆ, ಫುಟ್ಬಾಲ್ ಪಂಡಿತರ ಪ್ರಕಾರ ಜರ್ಮನಿ ಫೈನಲ್ ತಲುಪುವುದು ಗ್ಯಾರಂಟಿ. ಹಾಲೆಂಡ್ ಅನ್ನು ಸೋಲಿಸಿ ಪ್ರಶಸ್ತಿಗೆ ಜರ್ಮನ್ನರು ಮುತ್ತಿಕ್ಕಲಿದ್ದಾರೆ ಎಂದಿದ್ದಾರೆ. ಆದರೆ, ದಕ್ಷಿಣ ಅಮೆರಿಕದ ಏಕೈಕ ತಂಡವಾಗಿರುವ ಉರುಗ್ವೆ ಹಿಂದೆ ಬ್ರೆಜಿಲ್ ಹಾಗೂ ಅರ್ಜೆಂಟೀನಾ ಅಭಿಮಾನಿಗಳ ಬೆಂಬಲ ಕೂಡಾ ಸಿಗುವ ಸಾಧ್ಯತೆಯಿದ್ದು, ಹಾಲೆಂಡ್ ಅನ್ನು ಮಣಿಸುವ ನಿರೀಕ್ಷೆಯಲ್ಲಿದ್ದಾರೆ.ಯಾರೂ ಉರುಗ್ವೆ ಫೈನಲ್ ಪ್ರವೇಶದ ಬಗ್ಗೆ ಮಾತನಾಡುತ್ತಿಲ್ಲ. ಆದರೆ, ಹಾಲೆಂಡ್ ಅನ್ನು ಬಗ್ಗುಬಡಿಯುವ ಎಲ್ಲಾ ಸಾಮರ್ಥ್ಯ ಉರುಗ್ವೆಗಿದೆ.
ಜರ್ಮನಿಗೆ ಹೋಲಿಸಿದರೆ ಮೇಲ್ನೋಟ ಸ್ಪೇನ್ ಬಲಿಷ್ಠವಾದರೂ ಪ್ರಮುಖ ಪಂದ್ಯಗಳಲ್ಲಿ ಸ್ಪೇನ್ ಯಶ ಸಾಧಿಸಿದ ದಾಖಲೆ ಹೊಂದಿದೆ. ಲೀಗ್ ಹಂತದಲ್ಲಿ ಜರ್ಮನ್ನರು ದುರ್ಲಬ ಸೆರ್ಬಿಯಾ ವಿರುದ್ಧ ಸೋಲುಂಡಿದ್ದರು. ಹಾಗೂ ಸ್ಪೇನ್ ಕೂಡಾ ಸ್ವಿಡ್ಜರ್ ಲ್ಯಾಂಡ್ ವಿರುದ್ಧ ಸೋತಿದೆ.
ಇತ್ತೀಚಿನ ಪ್ರದರ್ಶನವನ್ನು ಗಮನಿಸಿದರೆ, ಒಂದುವೇಳೆ ಸೆಮೀಸ್ ನಲ್ಲಿ ಸ್ಪೇನ್ ಗೆದ್ದರೆ, ಪ್ರಶಸ್ತಿ ಸ್ಪೇನ್ ಪಾಲಾಗುವುದಂತೂ ಸತ್ಯ. ಆದರೆ, ಹಾಲೆಂಡ್ ಅನ್ನು ನಂಬುವಂತಿಲ್ಲ. ಒಟ್ಟಿನಲ್ಲಿ ಕುತೂಹಲಕಾರಿ ಪಂದ್ಯಗಳ ನಿರೀಕ್ಷೆ ಎಲ್ಲರಲ್ಲೂ ಮನೆ ಮಾಡಿದೆ.
ಮೊದಲ ಸೆಮಿಫೈನಲ್: ಉರುಗ್ವೆ Vs ನೆದರ್ಲಾಂಡ್ ಜು.7 (ಮಧ್ಯರಾತ್ರಿ 12 ಗಂಟೆ), ಡರ್ಬನ್
ಎರಡನೇ ಸೆಮಿಫೈನಲ್: ಜರ್ಮನಿ Vs ಸ್ಪೇನ್, ಜು.8(ಮಧ್ಯರಾತ್ರಿ 12 ಗಂಟೆ) ಕೇಪ್ ಟೌನ್
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications