ಆಲಮಟ್ಟಿ ವಿವಾದ : ರಾಜ್ಯಕ್ಕೆ ಜಯ
ನವದೆಹಲಿ
ಜು 1 : ಆಲಮಟ್ಟಿ ಅಣೆಕಟ್ಟಿನ ಎತ್ತರದ ಮರು ಸಮೀಕ್ಷೆ ನಡೆಸುವ ಅಗತ್ಯವಿಲ್ಲ ಎಂದು ಕೃಷ್ಣಾ ನದಿ ನೀರು ನ್ಯಾಯ ಮಂಡಳಿ ತೀರ್ಪು ನೀಡುವ ಮೂಲಕ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಮಹತ್ವದ ಜಯ ಲಭಿಸಿದ್ದು, ಆಂಧ್ರಪ್ರದೇಶ ಮುಖಭಂಗ ಅನುಭವಿಸಿದೆ. id="toptextpromo">ಕಳೆದ
ಮಾರ್ಚ್ 23 ರಂದು ಮರು ಸಮೀಕ್ಷೆ ನಡೆಸಬೇಕೆಂದು ಆಂಧ್ರ ಅರ್ಜಿ ಸಲ್ಲಿಸಿತ್ತು. ಅಲ್ಲದೆ ದಂಡಾವತಿ ಯೋಜನೆಯನ್ನು ಮಂಡಳಿಯ ಗಮನಕ್ಕೆ ತಾರದೆ ಜಾರಿ ಮಾಡುತ್ತಿದೆ ಎಂದು ದಾಖಲೆ ಸಮೇತ ಆರೋಪಿಸಿತ್ತು. ಅಣೆಕಟ್ಟಿನ ಎತ್ತರ 519 .6 ಮೀಟರ್ ಮೀರಬಾರದೆಂದು ಸುಪ್ರೀಂಕೋರ್ಟ್ ತೀರ್ಪನ್ನು ಕರ್ನಾಟಕ ಉಲ್ಲಂಘಿಸಿದೆ. ನಿಗದಿಪಡಿಸಿದಕ್ಕಿಂತ 0.6 ಮೀಟರ್ ನಷ್ಟು ಹೆಚ್ಚಿದೆ ಎಂದು ಆಂಧ್ರ ದೂರಿತ್ತು. id='are-slot-1' class='oiad oi-axt oiadv'> id='top-searched-articles'>ಪ್ರಕರಣದ
ಕುರಿತು ಬುಧವಾರ (ಜೂ 30 ) ಮಹತ್ವದ ತೀರ್ಪು ನೀಡಿದ ನ್ಯಾಯಮೂರ್ತಿ ಬೃಜೇಶ್ ಕುಮಾರ್ ನೇತೃತ್ವದ ನ್ಯಾಯ ಮಂಡಳಿ ಆಲಮಟ್ಟಿ ಅಣೆಕಟ್ಟಿನ ಮರು ಸಮೀಕ್ಷೆ ನಡೆಸುವ ಅಗತ್ಯವಿಲ್ಲ. 1996 ರಲ್ಲಿ ನಡೆಸಿದ ಸಮೀಕ್ಷೆಯೇ ಸರಿಯಾಗಿದೆ ಎಂದು ತೀರ್ಪು ನೀಡಿದೆ. ಇದರಿಂದ ಆಲಮಟ್ಟಿ ಅಣೆಕಟ್ಟಿನ ಆತಂಕ ಸದ್ಯಕ್ಕೆ ನಿವಾರಣೆಯಾದಂತಾಗಿದೆ. ಬರುವ ಸೆ. 2ರಂದು ಕೃಷ್ಣ ನದಿ ನೀರು ಮಂಡಳಿಯ ಅವಧಿ ಮುಕ್ತಾಯವಾಗಲಿದ್ದು, ಅದಕ್ಕೆ ಮೊದಲು ಅಂತಿಮ ತೀರ್ಪು ಹೊರ ಬೀಳಲಿದೆ.











Click it and Unblock the Notifications