ಹತ್ತು ಸಾವಿರಕ್ಕಾಗಿ ನೇಣಿಗೇರಿದ ನವವಿವಾಹಿತೆ
ಬೆಂಗಳೂರು,
ಜೂ. 30 : ಕೇವಲ ಹತ್ತೇ ಹತ್ತು ಸಾವಿರಕ್ಕಾಗಿ ನವವಿವಾಹಿತೆಯೊಬ್ಬಳು ಪ್ರಾಣ ತೆತ್ತಳು ಎಂದರೆ ನಂಬಲು ಸಾಧ್ಯವೇ ? ವಿವಾಹ ವೇಳೆ ನೀಡಬೇಕಿದ್ದ ಬಾಕಿ 10 ಸಾವಿರ ವರದಕ್ಷಿಣೆ ನೀಡಲಿಲ್ಲ ಎಂದು ಪತಿ ಮತ್ತು ಕುಟುಂಬದವರು ನೀಡುತ್ತಿದ್ದ ಕಿರುಕುಳ ತಾಳದೆ ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ನಡೆದಿದೆ. id="toptextpromo">ನಗರದ
ಅಮೃತಹಳ್ಳಿ ಕೆಂಪಾಪುರದ ವೆಂಕಟಗೌಡ ಲೇಔಟ್ ನಿವಾಸಿ ನಂದಿನಿ(19) ಅತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ. ಪತಿ ಮೋಹನ್ ಕುಮಾರನನ್ನು ಅಮೃತಹಳ್ಳಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದು, ಆತನ ಪೋಷಕರು ತಲೆಮರೆಸಿಕೊಂಡಿದ್ದಾರೆ. ನಂದಿನಿ ಮೂಲತಃ ಮೈಸೂರಿನ ಜಾಕಿ ಕ್ವಾಟ್ರಸ್ ನಿವಾಸಿ ಮೋಹನ್ ನೊಂದಿಗೆ ವಿವಾಹವಾಗಿತ್ತು. ವಿವಾಹದ ವೇಳೆ 150 ಗ್ರಾಂ ಚಿನ್ನ ಹಾಗೂ ಬೈಕು ನೀಡುವುದಾಗಿ ನಂದಿನಿ ಕುಟುಂಬದವರು ತಿಳಿಸಿದ್ದರು. id='are-slot-1' class='oiad oi-axt oiadv'> id='top-searched-articles'>ಆದರೆ,
ಸಮಯಕ್ಕೆ ಬೈಕು ಕೊಡಲು ಸಾಧ್ಯವಾಗಿರಲಿಲ್ಲ. ಆದ್ದರಿಂದ 20 ಸಾವಿರ ರುಪಾಯಿ ಹಣ ನೀಡುವುದಾಗಿ ನಂದಿನಿ ಸಹೋದರ ಮುದ್ದಣ್ಣ ತಿಳಿಸಿದ್ದರು. ಇದಾದ ಕೆಲ ದಿನಗಳ ನಂತರ ಬಾಕಿ ಇರುವ ಹತ್ತು ಸಾವಿರ ರುಪಾಯಿ ನೀಡುವಂತೆ ಮೋಹನ್ ಒತ್ತಾಯಿಸುತ್ತಿದ್ದ. ಇದರಿಂದ ನೊಂದ ನಂದಿನಿ ಸೋಮವಾರ ರಾತ್ರಿ ಮನೆಯ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾಳೆ ಎಂದು ಪೋಷಕರು ದೂರಿದ್ದಾರೆ. ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











Click it and Unblock the Notifications