ರಾಹುಲ್ ಗಾಂಧಿ ಮೊಬೈಲ್ ಎಗರಿಸಿದ್ದ ಭೂಪ!

ಲಂಡನ್ ನಿಂದ ಬಂದಿಳಿದ ರಾಹುಲ್ , ತಮ್ಮ ಬ್ಯಾಗ್ ಪಡೆಯುವಾಗ ಕಳ್ಳತನ ನಡೆದಿದೆ. ಆದರೆ, ಆ ಸಮಯದಲ್ಲಿ ಅದನ್ನು ಗಮನಿಸದೇ ಮನೆಗೆ ಬಂದು ನೋಡಿದ ರಾಹುಲ್ ಗೆ ಮೊಬೈಲ್ ಕಾಣೆಯಾಗಿರುವುದು ತಿಳಿದಿದೆ. ತಕ್ಷಣವೇ ತಮ್ಮ ವಿಶೇಷ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಒಂದೆರಡು ದಿನಗಳ ಬಳಿಕ ವಿಮಾನ ನಿಲ್ದಾಣದ ಸರಕು ಸರಂಜಾಮು ನಿರ್ವಹಣೆಯ ಸ್ಥಳದಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದೆ.ಸಿಸಿಟಿವಿಯ ನೆರವಿನಿಂದ ಇಬ್ಬರು ಶಂಕಿತರನ್ನು ಗುರುತಿಸಿ ವಿಚಾರಣೆಗೆ ಒಳಪಡಿಸಿದಾಗ, ಮೊಬೈಲ್ ಸುಳಿವು ಸಿಕ್ಕಿತು. ಸರಕು ನಿರ್ವಹಣೆ ಸಿಬ್ಬಂದಿಗಳೇ ಈ ಕೃತ್ಯ ಎಸಗಿದ್ದು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.
ಆದರೆ, ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಯಾವುದೆ ದೂರುದಾಖಲಾಗಿಲ್ಲ. ರಾಹುಲ್ ಗಾಂಧಿ ಅವರ ಮೊಬೈಲ್ ನಲ್ಲಿ ವೈಯಕ್ತಿಕ ಹಾಗೂ ಆಪ್ತ ಸ್ನೇಹಿತರ , ಅಧಿಕಾರಿಗಳ ಮೊಬೈಲ್ ನಂಬರ್ ಗಳಿದ್ದವು ಎನ್ನಲಾಗಿದೆ.












Click it and Unblock the Notifications