ಬಿಎಸ್ಎನ್ಎಲ್ ನಿಂದ ವೇಗವರ್ಧಕ ಬ್ರಾಡ್ ಬ್ಯಾಂಡ್ ಸೇವೆ

ಚಂದಾದಾರರು ಪಡೆದಿರುವ ವಿವಿಧಮಯ ಪ್ಲಾನ್ ಗಳಿಗನುಸಾರವಾಗಿ ವೇಗವರ್ಧಕ ಸೇವೆ ಲಭಿಸುತ್ತಿದೆ. ಒಟ್ಟಿನಲ್ಲಿ ದೇಶದ ಎಲ್ಲ ಬ್ರಾಡ್ ಬ್ಯಾಂಡ್ ಬಳಕೆದಾರರಿಗೆ ಸುಗ್ಗಿಯೋ ಸುಗ್ಗಿ.
ಬಿಬಿ ಹೋಮ್ ಕೊಂಬೊ ಯುಎಲ್ 750 ಪ್ಲಾನ್ ಮತ್ತು ಬಿಬಿ ಹೋಮ್ ಯುಎಲ್ 750 ಪ್ಲಾನ್ ಅಡಿಗಳಲ್ಲಿ ಚಂದಾರಾರರಾಗಿರುವವರು ಇನ್ನು ಮುಂದೆ 256 ಕೆಬಿಪಿಎಸ್ ವೇಗದ ಬದಲಾಗಿ 512 ಕೆಬಿಪಿಎಸ್ ವೇಗದಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಇದೇ ವೇಗ ಬಿಬಿ ಹೋಮ್ ಯುಎಲ್ಎಫ್ 900 ಪ್ಲಾನ್ ಚಂದಾದಾರರಿಗೂ ಲಭಿಸಲಿದೆ. ಬಿಬಿ ಹೋಮ್ ಕೊಂಬೊ ಯುಎಲ್ಎಫ್ 1000 ಪ್ಲಾನ್ ಚಂದಾದಾರರಿಗೆ 1 ಎಂಬಿಪಿಎಸ್ ವೇಗದ ಬ್ರಾಡ್ ಬ್ಯಾಂಡ್ ಸೇವೆ ದೊರೆಯಲಿದೆ.
ಬಿಬಿ ಹೋಮ್ ಕೊಂಬೊ ಯುಎಲ್ಎಫ್ 1100 ಮತ್ತು ಬಿಬಿ ಕೊಂಬೊ ಯುಎಲ್ಎಫ್ 1350 ಪ್ಲಾನ್ ಹೊಂದಿರುವವರಿಗೆ 2 ಎಂಬಿಪಿಎಸ್ ವೇಗದ ಸೇವೆ ದಕ್ಕಲಿದೆ. ಇದರೊಟ್ಟಿಗೆ ಮನೆ ಬಳಕೆದಾರರಿಗೆ ಎರಡು ಹೊಸ ಯೋಜನೆಗಳನ್ನು ಬಿಎಸ್ಎನ್ಎಲ್ ಪ್ರಾರಂಭಿಸಿದೆ. ಬಿಬಿ ಹೋಮ್ ಕೊಂಬೊ ಯುಎಲ್ಎಫ್ 1499 ಮತ್ತು ಬಿಬಿ ಹೋಮ್ ಕೊಂಬೊ ಯುಎಲ್ಎಫ್ 2999 ಪ್ಲಾನ್ ನಲ್ಲಿ ಚಂದಾದಾರರಾದರೆ ಕ್ರಮವಾಗಿ 1 ಎಂಬಿಪಿಎಸ್ ಮತ್ತು 2 ಎಂಬಿಪಿಎಸ್ ವೇಗದ ಸೇವೆ ಸಿಗಲಿದೆ. ಮೇಲಿನ ಅನೇಕ ಪ್ಲಾನ್ ಗಳಿಗೆ ತಿಂಗಳ ನಿಗದಿತ ಉಚಿತ ಕರೆಗಳ ಸೌಲಭ್ಯವೂ ಸಿಗುತ್ತಿದೆ.
ಅದೇ ರೀತಿ, ಬಿಬಿಜಿ ಯುಎಲ್ಎಫ್ 1500 ಮತ್ತು ಬಿಬಿಜಿ ಕೊಂಬೊ 1500 ಪ್ಲಾನ್ ಚಂದಾದಾರರಿಗೆ ಹಿಂದಿದ್ದ 2 ಎಂಬಿಪಿಎಸ್ ವೇಗಕ್ಕೆ ಬದಲಾಗಿ 4 ಎಂಬಿಪಿಎಸ್ ವೇಗದ ಸೇವೆ ಸಿಗುತ್ತಿದೆ.












Click it and Unblock the Notifications