ವಿದ್ಯುತ್ ಕ್ಷಾಮ ಹಳೆ ಸರ್ಕಾರಗಳ ಪಾಪದ ಫಲ

50 ವರ್ಷ ಸುದೀರ್ಘ ಕಾಲ ರಾಜ್ಯವನ್ನಾಳಿದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ದಲಿತ ಹಾಗೂ ಅಲ್ಪಸಂಖ್ಯಾತ ವರ್ಗವನ್ನು ಕೇವಲ ವೋಟ್ ಬ್ಯಾಂಕ್‌ಗಳನ್ನಾಗಿ ಮಾಡಿಕೊಂಡಿದ್ದವೇ ವಿನಃ ಈ ಸಮುದಾಯಗಳ ಅಭಿವೃದ್ಧಿಗೆ ಯಾವುದೇ ನಿರ್ದಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿರಲಿಲ್ಲ.
ಆದರೆ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆ ಅಲ್ಪಸಂಖ್ಯಾತರ ಅಭಿವೃದ್ಧಿಗೆ 207 ಕೋಟಿ ರು.ಗಳನ್ನು ಮೀಸಲಿಸಿರಿದೆ. ಅಲ್ಲದೆ ವಿವಿಧ ಸಮುದಾಯಗಳ ಉಪಕಸುಬುಗಳಿಗೆ ಸಾವಿರಾರು ಕೋಟಿ ರೂ.ಗಳ ಹಣ ಮಂಜೂರು ಮಾಡಿದೆ ಎಂದು ತಿಳಿಸಿದರು.
ಅಸಹಾಯಕ ಜನರ ಜೀವನೋಪಾಯಕ್ಕಾಗಿ ಸಂಧ್ಯಾ ಸುರಕ್ಷಾ, ಭಾಗ್ಯಲಕ್ಷ್ಮಿ , ವಿಧವಾ ವೇತನ, ಅಂಗವಿಕಲ ವೇತನಗಳನ್ನು ಜರಿಗೆ ತಂದು ಹಿಂದಿನ ಸರ್ಕಾರಗಳು ನೀಡುತ್ತಿದ್ದ 100 ರು. ಬದಲಾಗಿ 400 ಹಾಗೂ 1000 ರು. ಗಳಿಗೆ ಮಾಸಿಕ ವೇತನ ಹೆಚ್ಚಿಸಿದ ಖ್ಯಾತಿ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ. ಕೇವಲ 2 ವರ್ಷದಲ್ಲಿ ರಾಜ್ಯದ 92 ಲಕ್ಷ ಜನರಿಗೆ ಸೌಲಭ್ಯ ಕಲ್ಪಿಸಿಕೊಟ್ಟ ಪ್ರಥಮ ಸರ್ಕಾರ ನಮ್ಮದಾಗಿದೆ ಎಂದು ಹೇಳಿದರು.












Click it and Unblock the Notifications