ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೈಲೋತ್ಪನ್ನ್ನ ಬೆಲೆ ಏರಿಕೆ; ವಿಪಕ್ಷಗಳ ಭಾರತ ಬಂದ್?

By Rajendra
|
Google Oneindia Kannada News

Opposition plans to call Bharat Bandh
ನವದೆಹಲಿ, ಜೂ.28: ಪೆಟ್ರೋಲ್ ,ಡೀಸೆಲ್ ಬೆಲೆ ಹೆಚ್ಚಳ ವಿರೋಧಿಸಿ ಭಾರತ ಬಂದ್ ನಡೆಸಲು ಬಿಜೆಪಿ, ಎಡರಂಗ ಹಾಗೂ ಇತರೆ ವಿರೋಧ ಪಕ್ಷಕರು ಸಂಸತ್ತಿನ ಮುಂಗಾಗು ಅಧಿವೇಶನಕ್ಕೂ ಮುನ್ನ ಆಚರಿಸಲು ನಿರ್ಧರಿಸಿವೆ. ಭಾರತ ಬಂದ್ ದಿನಾಂಕ ಇನ್ನೂ ನಿರ್ಧಾರವಾಗಿಲ್ಲ.

ತಮ್ಮ ಪ್ರಾಬಲ್ಯವುಳ್ಳ ರಾಜ್ಯಗಳಲ್ಲಿ ಪ್ರತಿಪಕ್ಷಗಳು ಮುಷ್ಕರ ನಡೆಸಲು ಜೆಡಿಯು ಮುಖ್ಯಸ್ಥ ಶರದ್ ಯಾದವ್ ಶನಿವಾರ ಸಲಹೆ ನೀಡಿದ್ದರು. ಯಾದವ್ ಅವರ ಸಲಹೆಗೆ ಬಿಜೆಪಿ, ಸಿಪಿಐ, ಸಮಾಜವಾದಿ ಪಕ್ಷ, ತೆಲುಗು ದೇಶಂ ಮತ್ತು ಭಾರತೀಯ ಲೋಕದಳ ಸಮ್ಮತಿ ಸೂಚಿಸಿವೆ.

ಬೆಲೆ ಏರಿಕೆ ವಿರುದ್ಧ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನವನ್ನು ಯಾದವ್ ಮಾಡುತ್ತಿದ್ದು ಹಲವು ನಾಯಕರ ಜೊತೆ ಚರ್ಚಿಸಿ ಜಂಟಿ ಚಳುವಳಿ ಸಲಹೆಗೆ ಒಪ್ಪಿಗೆ ಪಡೆದರು ಎಂದು ಮೂಲಗಳು ತಿಳಿಸಿವೆ. ಲಾಲೂ ಮನವೊಲಿಸುವಂತ್ರೆ ಕಾರಟ್ ಸೂಚಿಸಲಿದ್ದಾರೆ. ಬಿಎಸ್ ಪಿ, ಎಲ್ ಜೆಇ, ಎಐಎಡಿಎಂಕೆ, ಜೆಡಿಯು ಪಕ್ಷಗಳನ್ನು ಆಹ್ವಾನಿಸುವ ಪ್ರಯತ್ನ ನಡೆದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X