ಕೇಂದ್ರದಲ್ಲಿ ತಮಿಳು ವ್ಯಾವಹಾರಿಕ ಭಾಷೆಯಾಗಲಿ

ಸುಮಾರು 400 ಕೋಟಿ ರೂಪಾಯಿ ವೆಚ್ಚದಲ್ಲಿ ಇಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ತಮಿಳು ಸಮ್ಮೇಳನದಲ್ಲಿ ಮಾತನಾಡುತ್ತಾ ಕರುಣಾನಿಧಿ, ತಮಿಳು ಭಾಷಿಗರಿಗೆ ಸರ್ಕಾರಿ ಹುದ್ದೆಯಲ್ಲೂ ಪ್ರಾಮುಖ್ಯತೆ ನೀಡಬೇಕು.
ತಮಿಳುನಾಡಿನಲ್ಲಿರುವ ಕೇಂದ್ರ ಸರ್ಕಾರದ ಅಧೀನ ಸಂಸ್ಥೆಗಳಿಗೆ ತಮಿಳಿಗರನ್ನು ಬಿಟ್ಟರೆ ಬೇರೆಯವರಿಗೆ ಕೆಲಸ ನೀಡಬಾರದು. ತಮಿಳು ಭಾಷೆಯ ಅಭಿವೃದ್ದಿಗೆ ಹೆಚ್ಚಿನ ಹಣಕಾಸಿನ ಸಹಾಯ ನೀಡಬೇಕೆಂದು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.
ತಮಿಳು ಕೇವಲ ಅಂತಾರಾಷ್ಟ್ರೀಯ ಭಾಷೆ ಮಾತ್ರವಲ್ಲ, ಇದು ವಿಶ್ವದ ಎಲ್ಲಾ ಭಾಷೆಗಳಿಗೂ ತಾಯಿ. ಜಗತ್ತಿನ ಶಾಸ್ತ್ರೀಯ ಭಾಷೆಗಳಲ್ಲಿ ತಮಿಳು ಪ್ರಮುಖವಾದದ್ದು ಸಂಸ್ಕೃತಕ್ಕಿಂತಲೂ ತಮಿಳು ಭಾಷೆ ಹಳೆಯದು ಎಂದು ವಿದ್ವಾಂಸರೇ ಅಭಿಪ್ರಾಯಪಟ್ಟಿದ್ದಾರೆ ಎಂದು ಕರುಣಾನಿಧಿ ಹೇಳಿದರು.
ಮುಂದಿನ ವರ್ಷ ನಡೆಯಲಿರುವ ಅಸೆಂಬ್ಲಿ ಚುನಾವಣೆ ಗಮನದಲ್ಲಿಟ್ಟುಕೊಂಡು ಡಿಎಂಕೆ ಸರಕಾರ ಹಲವು ಅಭಿವೃದ್ದಿ ಮತ್ತು ಜನಪರ ಕಾರ್ಯವನ್ನು ಈ ಸಂದರ್ಭದಲ್ಲಿ ಘೋಷಿಸಿದೆ. ಅಲ್ಲದೆ ತಮಿಳು ಭಾಷಾ ಅಭಿವೃದ್ದಿ ಮತ್ತು ಸಂಶೋಧನೆಗೆ ನೂರು ಕೋಟಿ ಮೀಸಲಿಡುವುದಾಗಿ ಕರುಣಾನಿಧಿ ಹೇಳಿಕೆ ನೀಡಿದ್ದಾರೆ. ಸಮ್ಮೇಳನದಲ್ಲಿ ಪ್ರಮುಖ ವಿಪಕ್ಷ ಎಐಡಿಎಂಕೆ ನಾಯಕರುಗಳ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.











Click it and Unblock the Notifications