ಜಾತಿ ಕಲಹಕ್ಕೆ ಪ್ರೇಮಿಗಳಿಬ್ಬರ ಬಲಿ
ಚಂಡೀಗಢ,
ಜೂ. 28 : ಪ್ರೇಮಕ್ಕೆ ಮುಳ್ಳಾಗಿದ್ದ ಪಾಲಕರಿಗೆ ಹೆದರಿ ವಿಭಿನ್ನ ಜಾತಿಗೆ ಸೇರಿದ ಪ್ರೇಮಿಗಳಿಬ್ಬರು ವೇಗದಿಂದ ಬರುತ್ತಿದ್ದ ರೈಲಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ಹರ್ಯಾಣದಲ್ಲಿ ನಡೆದಿದೆ. id="toptextpromo">ಮೃತರನ್ನು
ದೀಪಕ್ (25) ಮತ್ತು ಟೀನಾ (18) ಎಂದು ಗುರುತಿಸಲಾಗಿದೆ. ಸೈನಿ ಜಾತಿಗೆ ಸೇರಿದ ದೀಪಕ್, ಲೋಹರ್ ಜಾತಿಗೆ ಸೇರಿದ ಟೀನಾಳನ್ನು ಗಾಢವಾಗಿ ಪ್ರೀತಿಸುತ್ತಿದ್ದ. ಆದರೆ, ಅವರಿಬ್ಬರ ಪ್ರೇಮಕ್ಕೆ ಜಾತಿ ಅಡ್ಡಗಾಲು ಹಾಕಿತ್ತು, ಎರಡೂ ಕಡೆಯ ಪಾಲಕರ ವಿರೋಧವಿತ್ತು. id='are-slot-1' class='oiad oi-axt oiadv'> id='top-searched-articles'>ಇಂಥವರ
ನಡುವೆ ನಮ್ಮ ಪ್ರೀತಿ ಗೆಲ್ಲುವುದಿಲ್ಲ, ನಮ್ಮಿಬ್ಬರನ್ನು ಹಿರಿಯರು ಒಂದುಗೂಡಿಸುವುದಿಲ್ಲ ಎಂದು ಮನಗಂಡ ಪ್ರೇಮಿಗಳಿಬ್ಬರು ಸಾವಿನಲ್ಲೇ ಒಂದಾಗಲು ನಿರ್ಧರಿಸಿದ್ದಾರೆ. ಬೆಳಗಿನ ಜಾವ ಹಳ್ಳಿ ಬಿಟ್ಟ ಇಬ್ಬರು ಪಾಣಿಪತ್ ಜಿಲ್ಲೆಯ ಸಮಿಖಾ ಎಂಬಲ್ಲಿ ರೈಲು ನಿಲ್ದಾಣದಲ್ಲಿ ಸಂಧಿಸಿದ್ದಾರೆ ಮತ್ತು ಓಡುತ್ತಿದ್ದ ರೈಲಿಗೆ ಮೈಯೊಡ್ಡಿದ್ದಾರೆ.











Click it and Unblock the Notifications