ಪೊಲೀಸರೆ ಪೀಠಕ್ಕೆ ಬಂದು ಸಹಿ ಪಡೆಯಲಿ; ನಿತ್ಯಾನಂದ
ಬೆಂಗಳೂರು,
ಜೂ.26: ಪ್ರತಿ 15 ದಿನಗಳಿಗೆ ಒಮ್ಮೆ ಪೊಲೀಸ್ ಠಾಣೆಗೆ ಹೋಗಿ ಸಹಿ ಹಾಕುವ ಬದಲು ಪೊಲೀಸರೇ ನನ್ನ ಆಶ್ರಮಕ್ಕೆ ಬಂದು ಸಹಿ ಪಡೆಯಲಿ ಎಂದು ರಾಸಲೀಲೆ ಪ್ರಕರಣದ ಆರೋಪಿ ಬಿಡದಿ ಧ್ಯಾನಪೀಠದ ನಿತ್ಯಾನಂದ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ. id="toptextpromo">ಜೂನ್
11ರಂದು ನಿತ್ಯಾನಂದ ಸ್ವಾಮಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. ಹೈಕೋರ್ಟ್ ವಿಧಿಸಿರುವ ಷರತ್ತುಗಳನ್ನು ಸಡಿಲಿಸುವಂತೆ ನ್ಯಾಯಾಲಯಕ್ಕೆ ನಿತ್ಯಾನಂದ ಸ್ವಾಮಿ ಮನವಿ ಮಾಡಿಕೊಂಡಿದ್ದಾರೆ. ಪ್ರವಚನ, ಬೋಧನೆ ಇತ್ಯಾದಿ ಚಟುವಟಿಕೆಗಳಲ್ಲಿ ಭಾಗವಹಿಸಲು ತಮಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಅವರು ಮನವಿ ಮಾಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಯೋಗಾಭ್ಯಾಸ
ನಡೆಸುವುದು ಬಿಟ್ಟು ಬೇರೆ ಯಾವುದೇ ಚಟುವಟಿಕೆಗಳಲ್ಲಿ ಅವರು ಭಾಗವಹಿಸದಂತೆ ಕೋರ್ಟ್ ಷರತ್ತು ವಿಧಿಸಿದೆ. ತಮ್ಮ ಪ್ರವಚನಗಳಿಂದ ಲಕ್ಷಾಂತರ ಭಕ್ತರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದಾರೆ. ಇದೀಗ ಕೋರ್ಟ್ ಆದೇಶದಿಂದಾಗಿ ಭಕ್ತರಿಗೆ ನಿರಾಸೆಯಾಗಿದೆ. ಹೈಕೋರ್ಟ್ ವಿಧಿಸಿರುವ ಷರತ್ತುಗಳಿಂದ ಆಶ್ರಮ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ ಎಂದು ಸ್ವಾಮೀಜಿ ಪರ ವಕೀಲರು ತಿಳಿಸಿದ್ದಾರೆ.











Click it and Unblock the Notifications