ವಯಸ್ಕರ ಪ್ರತ್ಯೇಕ .xxx ಡೊಮೇನಿಗೆ ಅನುಮೋದನೆ

ವಯಸ್ಕರ ಅಂತರ್ಜಾಲ ತಾಣವನ್ನು ಇತರ ವೆಬ್ ಸೈಟ್ ಗಳಿಂದ ಪ್ರತ್ಯೇಕಿಸುವ ಉದ್ದೇಶದಿಂದ ವಯಸ್ಕರ ವೆಬ್ ಸೈಟುಗಳಿಗೆ .xxx ಡೊಮೇನ್ ಹೆಸರಿನ ವಿಸ್ತರಣೆ ನೀಡುವ ಕುರಿತು ಇಂದು ಇಂಟರ್ನೆಟ್ ಕಾರ್ಪೊರೇಷನ್ ಫಾರ್ ಅಸೈನ್ಡ್ ನೇಮ್ಸ್ ಅಂಡ್ ನಂಬರಿಂಗ್ (ICANN) ಮಹತ್ವದ ನಿರ್ಣಯ ತೆಗೆದುಕೊಂಡಿದೆ.

ಇಂಟರ್ನೆಟ್ ಜಗತ್ತಿನಲ್ಲಿ ಈಮೇಲನ್ನು ಬಿಟ್ಟರೆ ಹೆಚ್ಚು ಬಳಸಲಾಗುವ ವೆಬ್ ಸೈಟುಗಳೆಂದರೆ ಅವು ವಯಸ್ಕರ ತಾಣಗಳು. ವಯಸ್ಕರ ವೆಬ್ ಸೈಟುಗಳಿಗೆ ಪ್ರತ್ಯೇಕ ಡೊಮೇನ್ ಹೆಗ್ಗುರುತು ಇಲ್ಲದ್ದರಿಂದ ಯಾವುದು ವಯಸ್ಕರದು, ಯಾವುದು ಸರ್ವರ ವೀಕ್ಷಣೆಗೆ ಅರ್ಹವಾದುದು ಎಂದು ವರ್ಗೀಕರಿಸುವುದು ಕಷ್ಟವಾಗುತ್ತಿತ್ತು. ಪತ್ಯೇಕತೆಗಾಗಿ 2000ನೇ ಇಸ್ವಿಯಿಂದ ಹೋರಾಟ ನಡೆದಿತ್ತು. ಈಗ ಜಯ ಲಭಿಸಿದಂತಾಗಿದೆ.

icann-board-approves-xxx-top-level-domain

.xxx ಡೊಮೇನನ್ನು ಮಕ್ಕಳ ಮತ್ತು ಕೌಟುಂಬಿಕ ರಕ್ಷಣಾ ಗುಂಪುಗಳು, ಜಾಗತಿಕ ವಯಸ್ಕರ ಮನರಂಜನಾ ಉದ್ಯಮ, ಮಾಹಿತಿ ತಂತ್ರಜ್ಞಾನ ತಜ್ಞರು, ಸಾರ್ವಜನಿಕ ನೀತಿ ರೂಪಿಸುವ ಮುಖಂಡರು ಬೆಂಬಲಿಸಿದ್ದರು. .xxx ಡೊಮೇನಿಗಾಗಿ ಐಸಿಎಮ್ ರಿಜಿಸ್ಟ್ರಿ ದಶಕಗಳಿಂದ ಹೋರಾಟ ನಡೆಸುತ್ತಿತ್ತು. ಆದರೆ, ಇಂಥ ಡೊಮೇನುಗಳನ್ನು ಮಾರಾಟ ಮಾಡಲು ಐಸಿಎಎನ್ಎನ್ ಕ್ಯಾತೆ ತೆಗೆಯುತ್ತಲೇ ಬಂದಿತ್ತು.

ಇತ್ತೀಚಿನ ದಿನಗಳಲ್ಲಿ ಮೊಬೈಲುಗಳಲ್ಲಿ ಕೂಡ ಇಂಟರ್ನೆಟ್ಟನ್ನು ಬ್ರೌಸ್ ಮಾಡುವುದು ಸಾಧ್ಯವಿರುವುದರಿಂದ, ಇಂತಹ ವಯಸ್ಕರ ವೆಬ್ ಸೈಟುಗಳನ್ನು ಮಕ್ಕಳ ಗಮನದಿಂದ ದೂರವಿರಿಸುವುದು ಕಷ್ಟಸಾಧ್ಯವಾಗಿತ್ತು. ಇದು ಚೀನಾದಲ್ಲಂತೂ ಮಿತಿಮೀರಿತ್ತು. ಇನ್ನು, ವಯಸ್ಕರ ತಾಣಗಳಿಗೆ ಪ್ರತ್ಯೇಕ ಡೊಮೇನ್ ಹೆಸರು ಸಿಗುವುದರಿಂದ ಇಂತಹ ತಾಣಗಳನ್ನು ಮಕ್ಕಳಿಂದ ದೂರವಿರಿಸುವುದು ಸುಲಭ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+