ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಕಪ್ ನಿಂದ ಫ್ರಾನ್ಸ್, ದಕ್ಷಿಣ ಆಫ್ರಿಕಾ ಔಟ್

By Staff
|
Google Oneindia Kannada News

FIFA WC 2010, France and RSA go out
ಬ್ಲೋಮ್ ಫಾಂಟೆನ್, ಜೂ 23 : ಈ ಬಾರಿಯ ವಿಶ್ವಕಪ್ ನಲ್ಲಿ ಫೇವರಿಟ್ ತಂಡದಲ್ಲಿ ಒಂದಾಗಿದ್ದ ಮತ್ತು ಕಳೆದ ಬಾರಿಯ ರನ್ನರ್ ಅಪ್ ಫ್ರಾನ್ಸ್ ತಂಡ ನಾಕೌಟ್ ಹಂತ ತಲುಪಲೂ ಆಗದೆ ಫೀಫಾ 2010 ವಿಶ್ವಕಪ್ ನಿಂದ ಹೊರಬಿದ್ದಿದೆ. ಮಂಗಳವಾರ (ಜೂ.22) ನಡೆದ ಪ್ರಮುಖ ಪಂದ್ಯದಲ್ಲಿ ಫ್ರಾನ್ಸ್ ಆತಿಥೇಯ ದಕ್ಷಿಣ ಆಫ್ರಿಕಾ ತಂಡಕ್ಕೆ 2 -1 ಗೋಲುಗಳಿಂದ ಮಣಿಯಿತು.

'ಎ' ಗುಂಪಿನ ಮಹತ್ವದ ಪಂದ್ಯದಲ್ಲಿ ತಂಡದಲ್ಲಿ ಉದ್ಭವಿಸಿದ ಆಂತರಿಕ ಕಲಹದಿಂದಾಗಿ ಫ್ರಾನ್ಸ್ ತಂಡದ ನಾಯಕ ಪ್ಯಾಟ್ರಿಸ್ ವೇರಾ ಅವರನ್ನು ಕೊನೆಕ್ಷಣದಲ್ಲಿ ಕೈಬಿಡಲಾಗಿತ್ತು. ಅದಲ್ಲದೇ ಪಂದ್ಯದದ 26ನೇ ನಿಮಿಷದಲ್ಲಿ ಪ್ರಮುಖ ಮುನ್ನಡೆ ಆಟಗಾರ ಲೆಸ್ ಬ್ಲ್ಯೂಸ್ ರೆಡ್ ಕಾರ್ಡ್ ಪಡೆದು ಹೊರನಡೆದಿದ್ದು ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತಾಯಿತು.

ಫೀಫಾ ವಿಶ್ವಕಪ್ 2010 : ವಿಶ್ವಕಪ್ ವೇಳಾಪಟ್ಟಿ || ಅಂಕಗಳ ಪಟ್ಟಿ

ಪಂದ್ಯದ 20 ನೇ ನಿಮಿಷದಲ್ಲಿ ಆಫ್ರಿಕಾದ ಖುಮಾಲೋ ಮೊದಲ ಗೋಲು ದಾಖಲಿಸಿದರು. ಇದಾದ ನಂತರ 37ನೇ ನಿಮಿಷದಲ್ಲಿ ಮಗ್ಹೇಲಾ ಇನ್ನೊಂದು ಗೋಲು ದಾಖಲಿಸಿ ಮೊದಲಾರ್ಧದಲ್ಲಿ ಆಫ್ರಿಕಾ ತಂಡಕ್ಕೆ 2 -0 ಮುನ್ನಡೆ ದೊರಕಿಸಿ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಎರಡನೇ ಅವಧಿಯಲ್ಲಿ ದಾಳಿಯನ್ನು ತೀಕ್ಷ್ಣಗೊಳಿಸಿದ ಫ್ರಾನ್ಸ್ ತಂಡದ ಬದಲಿ ಆಟಗಾರ ಮಲೌಡಾ 70ನೇ ನಿಮಿಷದಲ್ಲಿ ಏಕೈಕ ಗೋಲು ದಾಖಲಿಸಿ ಸೋಲಿನ ಅಂತರ ತಗ್ಗಿಸಿದ ಸಮಾಧಾನ ಪಡೆದರು.

ವಿಡಿಯೋಗಳು : ವಿಶ್ವಕಪ್ ಆಶಯ ಗೀತೆ || ಗಾಯಕಿ ಶಕೀರಾ ಗೀತೆ || ಎಕಾನ್ ಹಾಡಿದ ಆಫ್ರಿಕಾ ಗೀತೆ ||

1998 ರ ಚಾಂಪಿಯನ್, 2006 ರ ರನ್ನರ್ ಅಪ್ ಖ್ಯಾತಿಯೊಂದಿಗೆ ಕಣಕ್ಕಿಳಿದಿದ್ದ ಫ್ರಾನ್ ತಂಡ ಆಡಿದ ಮೂರು ಪಂದ್ಯಗಳಿಂದ ಉರುಗ್ವೆ ವಿರುದ್ದ ಡ್ರಾ ಹಾಗೂ ಎರಡು ಪಂದ್ಯಗಳಲ್ಲಿ ಸೋತು ಕೇವಲ ಒಂದು ಅಂಕದೊಂದಿಗೆ ಗುಂಪಿನ ಕೊನೆಯ ಸ್ಥಾನಿಯಾಗಿ ಟೂರ್ನಿಯಿಂದ ಹೊರ ನಡೆಯಿತು.

ಪಂದ್ಯ ಗೆದ್ದರೂ ಸೋತ ದ. ಆಫ್ರಿಕಾ: ಫ್ರಾನ್ಸ್ ವಿರುದ್ಧ ಪಂದ್ಯ ಗೆದ್ದರೂ ಅತಿಥೇಯರು ಸಂಭ್ರಮ ಪಡುವ ಸ್ಥಿತಿಯಲ್ಲಿರಲಿಲ್ಲ. ಮುಂದಿನ ಸುತ್ತು ಪ್ರವೇಶಿಸಲು ಭಾರಿ ಅಂತರದ ಗೆಲುವು ದಕ್ಷಿಣ ಆಫ್ರಿಕಾಗೆ ಅನಿವಾರ್ಯವಾಗಿತ್ತು. ಮೆಕ್ಸಿಕೋ ಹಾಗೂ ದಕ್ಷಿಣ ಅಫ್ರಿಕಾ ಆಡಿದ ಮೂರು ಪಂದ್ಯಗಳಿಂದ ತಲಾ 4 ಅಂಕಗಳನ್ನು ಗಳಿಸಿದ್ದರೂ, ಗೋಲುಗಳ ಸರಾಸರಿಯ ಆಧಾರದ ಮೇಲೆ ಮೆಕ್ಸಿಕೋ ಮುಂದಿನ ಹಂತ ಪ್ರವೇಶಿಸಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X