ಗೆಲುವಿನ ನಾಗಾಲೋಟದಲ್ಲಿ ಮೆಸ್ಸಿ, ಮರಡೋನಾ

ಟೆವೆಜ್ ಸೇರಿದಂತೆ ಅರ್ಧದಷ್ಟು ಅನುಭವಿ ಆಟಗಾರರಿಗೆ ಕೋಚ್ ಮರಡೋನಾ ರೆಸ್ಟ್ ನೀಡಿದ್ದಲ್ಲದೆ, 22 ರ ಹರೆಯದ ಬಾರ್ಸಿಲೋನಾ ತಾರೆ ಮೆಸ್ಸಿಗೆ ತಂಡದ ನಾಯಕತ್ವ ದ ಹೊಣೆ ಹೊರೆಸಿದರು. ವಿಶ್ವಕಪ್ ನಲ್ಲಿ ಅರ್ಜಿಂಟಿನಾದ ಕಿರಿ ವಯಸ್ಸಿನ ನಾಯಕ ಎನಿಸಿದರು.
ಫೀಫಾ ವಿಶ್ವಕಪ್ 2010 : ವಿಶ್ವಕಪ್ ವೇಳಾಪಟ್ಟಿ || ಅಂಕಗಳ ಪಟ್ಟಿ||
ಗ್ರೀಸ್ ವಿರುದ್ಧ ಡ್ರಾ ಸಾಧಿಸಿದ್ದರೂ, ಅರ್ಜೆಂಟೀನಾ ಮುಂದಿನ ಹಂತ ತಲುಪುತ್ತಿತ್ತು.ಆದರೆ, ಮೆಸ್ಸಿ ಪಡೆ ಅರ್ಹ ಜಯ ಸಾಧಿಸಿ, ಬಿ ಗುಂಪಿನಲ್ಲಿ 9 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದು ಮುಂದಿನ ಹಂತ ತಲುಪಿದೆ. 16 ರ ಹಂತದಲ್ಲಿ ಅರ್ಜೆಂಟಿನಾ ಮೆಕ್ಸಿಕೋ ತಂಡ(ಎ ಗುಂಪಿನ 2ನೇ ತಂಡ)ವನ್ನು ಎದುರಿಸಲಿದೆ.
ಮೊದಲರ್ಧದಲ್ಲಿ ಗೋಲು ಗಳಿಸಲು ಎರಡು ತಂಡಗಳು ವಿಫಲವಾದವು. ಗ್ರೀಸ್ ನ ಸಮಾರಾಸ್ ಆಕ್ರಮಣಕಾರಿ ಪ್ರದರ್ಶನ ನೀಡಿದರೂ ಕೇವಲ ಇಬ್ಬರು ಡಿಫೆಂಡರ್ ಗಳು ಹಾಗೂ ಗೋಲಿಯನ್ನು ವಂಚಿಸಿ ಗೋಲ್ ಗಳಿಸುವಲ್ಲಿ ವಿಫಲರಾದರು. ಉಳಿದಂತೆ, ದ್ವಿತೀಯಾರ್ಧದಲ್ಲಿ ಅರ್ಜೆಂಟೀನಾ ಎಂದಿನ ಆಕ್ರಮಣಕಾರಿ ಆಟ ಪ್ರದರ್ಶಿಸಿ, 77 ನೇ ನಿಮಿಷದಲ್ಲಿ ಡೆಮಿಚೆಲಿಸ್ ಹಾಗೂ 89 ನೇ ನಿಮಿಷದಲ್ಲಿ ಪಲೆರ್ಮೊ ಗಳಿಸಿದ ಗೋಲುಗಳಿಂದ ಭರ್ಜರಿ ವಿಜಯ ಸಾಧಿಸಿತು.
ಮೆಸ್ಸಿ ಮತ್ತೆ ಮಿಸ್ : ಮುಂಪಡೆ ಆಟಗಾರ ಇನ್ನೂ ವಿಶ್ವಕಪ್ ನಲ್ಲಿ ಗೋಲಿನ ಖಾತೆ ತೆರೆದಿಲ್ಲ. ಗ್ರೀಸ್ ವಿರುದ್ಧ ಪಂದ್ಯದಲ್ಲಿ 85 ನೇ ನಿಮಿಷದ ನಂತರ ಮುನ್ನುಗ್ಗಿ ಹೊಡೆದ ಕಿಕ್, ದುರದೃಷ್ಟವಶಾತ್ ಗೋಲ್ ಪೋಸ್ಟ್ ಗೆ ತಾಗಿತು. ಮತ್ತೊಮ್ಮೆ ಹೊಡೆದಾಗ ಕೀಪರ್ ಕೈಯಿಂದ ಹಾರಿದ ಜಬಲನಿ(ಚೆಂಡು)ಯನ್ನು ಪಲೆರ್ಮೊ ಗೋಲಿನೊಳಗೆ ಕಳಿಸಿಯಾಗಿತ್ತು.
ವಿಡಿಯೋಗಳು : ವಿಶ್ವಕಪ್ ಆಶಯ ಗೀತೆ || ಗಾಯಕಿ ಶಕೀರಾ ಗೀತೆ || ಎಕಾನ್ ಹಾಡಿದ ಆಫ್ರಿಕಾ ಗೀತೆ ||
ಒಟ್ಟಿನಲ್ಲಿ ಗುರುವಾರ 23 ರ ಹುಟ್ಟುಹಬ್ಬದ ಸಂಭ್ರಮ ಆಚರಣೆಗೆ ಮುನ್ನ ಅರ್ಜೆಂಟೀನಾ ನಾಯಕನಿಗೆ ತಂಡದ ಆಟಗಾರರು ಹುಟ್ಟುಹಬ್ಬದ ಉಡುಗೊರೆಯಾಗಿ ಭರ್ಜರಿ ಜಯವನ್ನು ತಂದಿತ್ತಿದ್ದಾರೆ. ಡಿಯಗೋ ಮರಡೊನಾ ಎಲ್ಲರ ಟೀಕೆಗೆ ಗೆಲುವಿನ ಮೂಲಕ ಉತ್ತರ ನೀಡಿದ್ದಾರೆ.
ಫೋಟೊ ಫರ್ಫೆಕ್ಟ್ :ಮೊದಲರ್ಧದಲ್ಲಿ ಗ್ರೀಸ್ ನ ಸಮಾರಾಸ್ ಹಾಗೂ ಅರ್ಜೆಂಟೀನಾದ ಡೆಮಿಲಿಚಸ್ ಢಿಕ್ಕಿ ಹೊಡೆದದ್ದು ಫೊಟೋಗ್ರಾಫರ್ ಗಳಿಗೆ ಪಂದ್ಯದ ರೋಚಕ ಕ್ಷಣ ಎನ್ನಬಹುದು. ಉದ್ದುದ್ದ ಕೂದಲು ಬಿಟ್ಟಿರುವ ಇಬ್ಬರು ಆಟಗಾರರು ಪರಸ್ಪರ ಕಾಲುಗಳನ್ನು ಎತ್ತಿ ಢಿಕ್ಕಿ ಹೊಡೆದದ್ದು ಅದ್ಭುತವಾದ ದೃಶ್ಯವಾಗಿತ್ತು.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications