ಹಗರಣ : ರೈಲ್ವೇ ನೇಮಕಾತಿ ಪರೀಕ್ಷೆ ಮುಂದಕ್ಕೆ

ಮುಂದೂಡಲಾಗಿರುವ ಪರೀಕ್ಷಾ ದಿನಾಂಕವನ್ನು ರೈಲ್ವೆ ಇಲಾಖೆ ಸದ್ಯದಲ್ಲೇ ಪ್ರಕಟಿಸಲಿದೆ ಎಂದು ರೈಲ್ವೆ ನೇಮಕಾತಿ ವಿಭಾಗ ತಿಳಿಸಿದೆ. ತನಿಖಾಧಿಕಾರಿ, ರಿಸರ್ವೇಸನ್ ಕ್ಲರ್ಕ್, ಗೂಡ್ಸ್‌ಗಾರ್ಡ್ ಹೀಗೆ ವಿವಿಧ ಹುದ್ದೆಗಳಿಗೆ ರೈಲ್ವೆ ಇಲಾಖೆ ಜೂ. 27 ರಂದು ಪರೀಕ್ಷೆ ಏರ್ಪಡಿಸಿತ್ತು. ಇದೀಗ ನೇಮಕಾತಿ ಪ್ರಕ್ರಿಯೆಯಲ್ಲಿ ಅವ್ಯವಹಾರ ಪತ್ತೆಯಾದ ಹಿನ್ನೆಲೆಯಲ್ಲಿ ಎಲ್ಲ ಪರೀಕ್ಷೆಗಳನ್ನು ಮುಂದೂಡುವ ತೀರ್ಮಾನವನ್ನು ಇಲಾಖೆ ಕೈಗೊಂಡಿದೆ.
ಶುಕ್ರವಾರದಂದು ಸಿಬಿಐ ರೈಲ್ವೆ ನೇಮಕಾತಿ ಅವ್ಯ ವಹಾರವನ್ನು ಬಯಲಿಗೆಳೆದಿತ್ತು. ಈ ಸಂದರ್ಭದಲ್ಲಿ ಮುಂಬೈನ ಆಡಿಷನಲ್ ಡಿವಿಷನಲ್ ರೈಲ್ವೆ ಮ್ಯಾನೇಜರ್ ಹಾಗೂ ನೇಮಕಾತಿ ವಿಭಾಗದ ಮುಖ್ಯಸ್ಥನನ್ನು ಬಂಧಿಸಲಾಗಿತ್ತು.
ಪ್ರಶ್ನೆ ಪತ್ರಿಕೆ ಬಯಲಾದ ಹಿನ್ನೆಲೆಯಲ್ಲಿ ಆರ್‌ಆರ್‌ಬಿ ಮುಖ್ಯಸ್ಥ ಎಸ್.ಎಂ.ಶರ್ಮಾನನ್ನು ವಜಾಗೊಳಿಸಿ ಆದೇಶ ಹೊರಡಿಸಿತ್ತು. ಈ ಅವ್ಯವಹಾರದಲ್ಲಿ ಅಲ್ ಇಂಡಿಯಾ ಎಕ್ಸಾಮೀನೇಷನ್ ಆಫ್ ಆಸಿಸ್ಟೆಂಟ್ , ಆಸಿಸ್ಟೆಂಟ್ ಸ್ಟೇಷನ್ ಮಾಸ್ಟರ್ ಹೆಸರೂ ಕೂಡ ಪರೀಕ್ಷಾ ಅವ್ಯವಹಾರದಲ್ಲಿ ಕೇಳಿಬರುತ್ತಿದೆ.












Click it and Unblock the Notifications