ಸಾನಿಯಾ-ಶೋಯಾಬ್ ತರಹ ಇವರ ಪ್ರೇಮ ಗೆಲ್ಲಲಿ

24 ವರ್ಷದ ಭಾರತೀಯ ಯುವಕ ದೀಪಕ್ ಚಂದರ್ ಪಾಕಿಸ್ತಾನದ ಚೆಂದುಳ್ಳೆ ಚೆಲುವೆ ಮಾಡೆಲ್ಲನ್ನು ಅಂತರ್ಜಾಲದ ಮುಖಾಂತರ ಪ್ರೀತಿಸಿ, ಭಾರತ-ಪಾಕ್ ಗಡಿ ದಾಟಲು ವಿಫಲನಾಗಿ ಪೊಲೀಸರ ಅತಿಥಿಯಾಗಿದ್ದಾನೆ.
ನಡೆದ್ದದ್ದಿಷ್ಟು : ಎಂಥವರೂ ಪ್ರೇಮಕ್ಕೆ ಬೀಳುವ ವಯಸ್ಸಿನ, ಎಮ್ ಸಿ ಎ ಮಾಡಿರುವ ಉತ್ತರ ಪ್ರದೇಶದ ದೀಪಕ್ ಚಂದರ್ ಇಂಟರ್ನೆಟ್ ಮುಖಾಂತರ ಪಾಕಿಸ್ತಾನದ ಮಾಡೆಲ್ ನೈನಾ ಚೌಧರಿಯನ್ನು ಪರಿಚಯಿಸಿಕೊಂಡಿದ್ದಾನೆ. ಪರಿಚಯ ಸ್ನೇಹಕ್ಕೆ, ಸ್ನೇಹ ಪ್ರೇಮಕ್ಕೆ ತಿರುಗಿದೆ.
"ನೀನು ನನ್ನನ್ನು ನಿಜವಾಗಿ ಪ್ರೀತಿಸುವುದೇ ಆದರೆ, ಏನೇ ಸಾಹಸ ಮಾಡಿಯಾದರೂ ಪಾಕಿಸ್ತಾನಕ್ಕೆ ಬರಬೇಕು" ಎಂದು ನೈನಾ ಸವಾಲು ಹಾಕಿದ್ದಾಳೆ. ಅವಳು ಹೇಳಿದರೆ ಪ್ರಾಣ ನೀಡಲೂ ತಯಾರಿದ್ದ ದೀಪಕ್ ಪಾಸ್ಪೋರ್ಟ್ ಮತ್ತು ವೀಸಾ ಇಲ್ಲದೆ ಪಾಕಿಸ್ತಾನಕ್ಕೆ ಹೋಗುವ ಸಮಝೋತಾ ಎಕ್ಸ್ ಪ್ರೆಸ್ ರೈಲು ಹತ್ತಿದ್ದಾನೆ. ಹತ್ತುವ ಮೊದಲೇ ಅಕ್ರಮವಾಗಿ ಗಡಿ ದಾಟಲು ಯತ್ನಿಸಿದ ದೀಪಕ್ ನನ್ನು ಪೊಲೀಸರು ತಮ್ಮ ಅತಿಥಿಯನ್ನಾಗಿ ಮಾಡಿಕೊಂಡಿದ್ದಾರೆ.
ವಿಚಾರಣೆಯಲ್ಲಿ ತಾನು ನೈನಾಳನ್ನು ಇಂಟರ್ನೆಟ್ಟಿನಲ್ಲಿ ಸಂಧಿಸಿದ್ದು, ಪ್ರೇಮಿಸಿದ್ದು, ಅವಳು ಸವಾಲು ಹಾಕಿದ್ದು ಎಲ್ಲವನ್ನೂ ಪೊಲೀಸರೆದಿರು ನಿವೇದಿಸಿಕೊಂಡಿದ್ದಾನೆ. ಏನೇ ಆಗಲಿ, ಹೀರ್-ರಾಂಝಾ, ಲೈಲಾ-ಮಜನೂ, ಸಾನಿಯಾ-ಶೋಯಾಬ್ ತರಹ ಇವರಿಬ್ಬರ ಪ್ರೇಮ ಗೆಲ್ಲಲಿ.












Click it and Unblock the Notifications