ರಾಘವೇಶ್ವರ ಸ್ವಾಮೀಜಿ ಸಿಡಿ. ನಾಲ್ವರು ಶರಣಾಗತಿ
ಕಾರವಾರ,
ಜೂ.18: ಹೊಸನಗರದ ರಾಮಚಂದ್ರಾಪುರ ಮಠಾಧೀಶ ರಾಘವೇಶ್ವರ ಸ್ವಾಮೀಜಿಗಳ ನಕಲಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರು ಆರೋಪಿಗಳು ಕುಮಟಾ ಜೆಎಂಎಫ್ ಸಿ ನ್ಯಾಯಲಕ್ಕೆ ಶರಣಾಗಿದ್ದಾರೆ.ಶ್ರೀಗಳನ್ನೇ ಹೋಲುವ ವ್ಯಕ್ತಿಯನ್ನು ಬಳಸಿ ನಕಲಿ ಅಶ್ಲೀಲ ವಿಡಿಯೋ ಚಿತ್ರಿಕರಿಸಲಾಗಿತ್ತು. id="toptextpromo">ಶರಣಾದ
ಆರೋಪಿಗಳಲ್ಲಿ ಗಣೇಶ ವಾಸುದೇವ ಜೋಗಳೇಕರ ಸೋಮನಾಥ ವಾಸುದೇವ ಜೋಗಳೆಕರ ಅವರನ್ನು ಜೂ.19 ರವರೆಗೆ ಪೊಲೀಸ್ ಕಸ್ಟಡಿಯಲ್ಲಿರಿಸಿಕೊಳ್ಳಲು ಕೋರ್ಟ್ ಆದೇಶಿಸಿದೆ. ಉಳಿದಿಬ್ಬರು ಆರೋಪಿಗಳಾದ ಪಣಿರಾಜ ಗೋಪಿ ಹಾಗೂ ಕೃಷ್ಣ ಯೋಗ ಭಟ್ ಅವರಿಗೆ ಜೂ.30 ರವರೆಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>ನಿರೀಕ್ಷಣಾ
ಜಾಮೀನು ತಿರಸ್ಕಾರವಾದ ಹಿನ್ನೆಲೆಯಲ್ಲಿ ಆರೋಪಿಗಳು ನ್ಯಾಯಲಯಕ್ಕೆ ಶರಣರಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ13 ಜನರನ್ನು ಬಂಧಿಸಲಾಗಿದೆ. ರಾಘವೇಶ್ವರ ಭಾರತಿ ಸ್ವಾಮೀಜಿ ಅವರ ನಕಲಿ ಸಿಡಿ ಸೃಷ್ಟಿಸಿ ಅವರಿಗೆ ಅವಮಾನ ಮಾಡಲಾಗಿದೆ ಎಂದು ಗೋಕರ್ಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.











Click it and Unblock the Notifications