ಬರಸಿಡಿಲಿಗೆ ಸಿಕ್ಕಿ ಭಸ್ಮವಾದ ಜೀಸಸ್ ಮೂರ್ತಿ
ಒಹಾಯೋ,
ಜೂ.16:ಇಲ್ಲಿನ ಪ್ರಮುಖ ಪ್ರೇಕ್ಷಣೀಯ ಸ್ಥಳವಾದ ಸಾಲಿಡ್ ರಾಕ್ ಚರ್ಚ್ ನಲ್ಲಿ ಈಗ ಸ್ಮಶಾನ ಮೌನ ಆವರಿಸಿದೆ. ಚರ್ಚ್ ಬಳಿ ಬಂಡೆಗೆ ಹೊಂದಿಕೊಂಡಂತೆ ನಿರ್ಮಿತವಾಗಿದ್ದ ಕಿಂಗ್ಸ್ ಆಫ್ ಕಿಂಗ್ಸ್ ಯೇಸು ಕ್ರಿಸ್ತನ ಬೃಹತ್ ಪ್ರತಿಮೆ ಸಿಡಿಲಿನ ಹೊಡೆತಕ್ಕೆ ಸಿಕ್ಕು ಸುಟ್ಟು ಹೋಗಿದೆ. id="toptextpromo">ಸುಮಾರು
ಆರು ಮಹಡಿಯಷ್ಟು ಎತ್ತರವಿದ್ದ ಜೀಸಸ್ ಪ್ರತಿಮೆ ಸುಮಾರು 62 ಅಡಿ ಎತ್ತರ ಹಾಗೂ 40 ಅಡಿ ವಿಸ್ತಾರ ಹೊಂದಿತ್ತು. ಪ್ಲಾಸ್ಟಿಕ್ ಫೋಂ, ಫೈಬರ್ ಗ್ಲಾಸ್ ಬಳಸಿ ಸ್ಟೀಲ್ ಫ್ರೇಂಗಳಿಂದ ಪ್ರತಿಮೆ ನಿರ್ಮಿಸಲಾಗಿತ್ತು. ಸಿನ್ಸಿನಾಟಿಗೆ ಉತ್ತರ ದಿಕ್ಕಿನಲ್ಲಿರುವ ಮನ್ರೋದಲ್ಲಿನ ಈ ಪ್ರಸಿದ್ಧ ಪ್ರತಿಮೆಯ ಜೊತೆಗೆ ಪ್ರಾರ್ಥನಾ ಮಂದಿರವೂ ಬೆಂಕಿಯಿಂದ ಹಾನಿಗೊಳಗಾಗಿದೆ. id='are-slot-1' class='oiad oi-axt oiadv'> id='top-searched-articles'>ಭಗ್ನಾವಶೇಷಗಳ
ಅಡಿಯಲ್ಲಿ ಸಿಕ್ಕ ಪ್ರತಿಮೆಗಳ ಚೂರುಗಳನ್ನು ಜನ ಮನೆಗೆ ಒಯ್ಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಪ್ರತಿಮೆಯನ್ನು ಪುನಃ ನಿರ್ಮಿಸುತ್ತೇವೆ. ಈ ಬಾರಿ ಅಗ್ನಿ ನಿರೋಧಕ ಜೀಸಸ್ ಪ್ರತಿಮೆ ಮೇಲೇಳಲಿದೆ ಎಂದು ಚರ್ಚ್ ನ ಬಿಷಪ್ ಹೇಳಿದ್ದಾರೆ.











Click it and Unblock the Notifications