ವಿಮಾನ ಟೈರ್ ಸ್ಫೋಟ; ಪ್ರಯಾಣಿಕರು ಬಚಾವ್
ನವದೆಹಲಿ,
ಜೂ.15: ಸುಮಾರು ನೂರಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತಿದ್ದ ಇಂಡಿಯನ್ ಏರ್ ಲೈನ್ಸ್ ವಿಮಾನದ ಚಕ್ರಗಳು ಇಳಿಯುವ ವೇಳೆಯಲ್ಲಿ ಸ್ಫೋಟಗೊಂಡಿದೆ. ಆದರೆ, ಪೈಲಟ್ ನಿಯಂತ್ರಣ ಸಾಧಿಸಿದ್ದರಿಂದ ಭಾರೀ ಅನುಹುತದಿಂದ ಎಲ್ಲರೂ ಪಾರಾಗಿದ್ದಾರೆ. id="toptextpromo">ದೆಹಲಿಯ
ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(IGI Airport)ನಲ್ಲಿ ಇಂದು ಬೆಳಗ್ಗೆ 10.58ರ ಸುಮಾರಿಗೆ 102 ಪ್ರಯಾಣಿಕರು ಹಾಗೂ ಆರು ಮಂದಿ ಸಿಬ್ಬಂದಿಯನ್ನು ಹೊತ್ತಿದ್ದ ಇಂಡಿಯನ್ಏರಲೈನ್ ವಿಮಾನ IC 113 ಮುಂಬೈ-ಭೋಪಾಲ್-ಇಂದೋರ್-ದೆಹಲಿ ವಿಮಾನವು ಇಳಿಯುತ್ತಿದ್ದ ಹೊತ್ತಿನಲ್ಲಿ ಎರಡು ಚಕ್ರಗಳು ಸ್ಫೋಟಗೊಂಡಿದೆ. id='are-slot-1' class='oiad oi-axt oiadv'> id='top-searched-articles'>ವಿಮಾನದಲ್ಲಿದ್ದ
ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ಇಳಿದಿದ್ದಾರೆ ಎಂದು ಐಜಿಐ ಸಿಬ್ಬಂದಿ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ನಿಯಂತ್ರಣ ತಪ್ಪಿದ ಪರಿಣಾಮ ಸಂಭವಿಸಿದ ವಿಮಾನ ದುರಂತದಲ್ಲಿ 158ಕ್ಕೂ ಜನ ಸಾವನ್ನಪ್ಪಿದ್ದರು.











Click it and Unblock the Notifications