ರೋಚಕತೆ, ತಮಾಷೆ ಮತ್ತು ಅನಿರೀಕ್ಷಿತ ಫಲಿತಾಂಶ!

ಭಾರತೀಯ ಕಾಲಮಾನದನುಸಾರ ಇಂದು 00-00 ಗಂಟೆಗೆ ನಡೆದ ಎರಡನೇ ಪಂದ್ಯದಲ್ಲಿ 9ನೇ (ವಿಶ್ವ)ಶ್ರೇಯಾಂಕಿತ ಫ್ರಾನ್ಸ್ ತಂಡವು 16ನೇ (ವಿಶ್ವ)ಶ್ರೇಯಾಂಕಿತ ಉರುಗ್ವೆ ತಂಡವನ್ನು ಸೋಲಿಸುವುದೆಂದು ನಿರೀಕ್ಷಿಸಲಾಗಿತ್ತು. ಆದರೆ ಈ ಪಂದ್ಯವು ಗೋಲುರಹಿತ ಡ್ರಾ ಆಗಿ ಪರಿಸಮಾಪ್ತಿ ಹೊಂದಿತು.
ಮೊದಲ ಪಂದ್ಯದ ವರದಿಯನ್ನು ಇಂದಿನ ಪತ್ರಿಕೆಗಳಲ್ಲಿ ನೀವು ಓದುತ್ತೀರಿ. ಆದ್ದರಿಂದ ಎರಡನೆಯ ಪಂದ್ಯದ ಬಗ್ಗೆ ಮಾತ್ರ ಇಲ್ಲಿ ಬರೆಯುತ್ತೇನೆ. ಫ್ರಾನ್ಸ್-ಉರುಗ್ವೆ ನಡುವಣ ಈ ಪಂದ್ಯವು ಸಮಬಲದಿಂದ ಕೂಡಿದ್ದು ಹಲವು ರೋಚಕ ಸನ್ನಿವೇಶಗಳನ್ನು ಹಾಗೂ ತಮಾಷೆ ಸನ್ನಿವೇಶಗಳನ್ನು ಪ್ರೇಕ್ಷಕರಿಗೆ ದಯಪಾಲಿಸಿತು.
ರೋಚಕತೆ-ತಮಾಷೆ
ಆಟದುದ್ದಕ್ಕೂ ಎದುರಾಳಿಗಳನ್ನು ಕೆಡೆಯುವುದು, ರೆಫ್ರಿಯೊಡನೆ ಕ್ಯಾತೆ ತೆಗೆಯುವುದು ನಡೆದೇ ಇತ್ತು. ಪರಿಣಾಮ, ರೆಫ್ರಿಯಿಂದ ಹಳದಿ ಕಾರ್ಡ್ ಶಿಕ್ಷೆ. ಉರುಗ್ವೆ ತಂಡದ ಆಟಗಾರನೊಬ್ಬ ಎರಡು ಸಲ ಹಳದಿ ಕಾರ್ಡ್ ಶಿಕ್ಷೆಗೆ ಗುರಿಯಾದುದರಿಂದಾಗಿ ಕೆಂಪು ಕಾರ್ಡ್ ತೋರಿಸಲ್ಪಟ್ಟು ಮೈದಾನದಿಂದ ಹೊರನಡೆಯಬೇಕಾಯಿತು. ಫ್ರಾನ್ಸ್‌ನ ಪ್ರಮುಖ ಆಟಗಾರ ಥಿಯರಿ ಹೆನ್ರಿಯನ್ನು ಕಣಕ್ಕಿಳಿಸಿದ್ದು ಪಂದ್ಯ ಮುಗಿಯಲು ಕೇವಲ 20 ನಿಮಿಷಗಳಿದ್ದಾಗ! ಆತನನ್ನು ಮೊದಲೇ ಕಣಕ್ಕಿಳಿಸಿದ್ದಲ್ಲಿ ಫ್ರಾನ್ಸ್ ಗೆಲ್ಲುತ್ತಿತ್ತೇನೋ.
ಕೊನೆಯ ಹತ್ತು ನಿಮಿಷ ಕಾಲ ಉರುಗ್ವೆ ತಂಡದಲ್ಲಿ ಕೆಂಪು ಕಾರ್ಡಿನಿಂದಾಗಿ ಒಬ್ಬ ಆಟಗಾರ ಕಡಿಮೆಯಿದ್ದರೂ ಅದರ ಲಾಭವನ್ನು ಫ್ರಾನ್ಸ್ ತಂಡ ಪಡೆಯಲು ವಿಫಲವಾಯಿತು.
ಪಂದ್ಯ ನಡೆಯುತ್ತಿದ್ದಾಗ ಮೈದಾನದೊಳಕ್ಕೆ ಎರಡು ಗಾಳಿತುಂಬಿದ ಬಲೂನುಗಳು ಬಂದುಬಿದ್ದವು! ರೆಫ್ರಿಯ ಆದೇಶದಮೇರೆಗೆ ಅವನ್ನು ಆಟಗಾರನೊಬ್ಬ ಕಾಲಿನಿಂದ ಚುಚ್ಚಿ ಒಡೆದ. ಮೈದಾನದ ಸೀಮಾರೇಖೆಯ ಜಸ್ಟ್ ಹೊರಗೆ ಕೆಲವು ಉಬ್ಬಿದ ಬಲೂನುಗಳು ನೆಲದಮೇಲೆ ಹರಿದಾಡುತ್ತಿದ್ದವು!
ಜಾರಿಬಿದ್ದ ಜಾಣ
ಆಟ ನಡೆಯುವಾಗ ಆಟಗಾರರು ಕಾಲುಜಾರಿ ಬೀಳುವುದು ಸಾಮಾನ್ಯ. ಆದರೆ ಈ ಪಂದ್ಯದಲ್ಲಿ ರೆಫ್ರಿಯೇ ಜಾರಿಬಿದ್ದ ಘಟನೆ ನಡೆಯಿತು! ಓಟದ ದಿಕ್ಕು ಬದಲಾಯಿಸುವಾಗ ಜಾರಿಬಿದ್ದ ರೆಫ್ರಿ ಮರುಗಳಿಗೆಯೇ ಚೇತರಿಸಿಕೊಂಡು ಮೇಲೆದ್ದ.
ಮುಂದೇನು?
'ಎ' ಗುಂಪಿನ ಬಲಿಷ್ಠ ತಂಡಗಳಾದ ಫ್ರಾನ್ಸ್ ಮತ್ತು ಮೆಕ್ಸಿಕೊ ಇವೆರಡೂ ತಂಡಗಳೂ ಮೊದಲ ಪಂದ್ಯಗಳ ಅಂಕಗಳನ್ನು ದುರ್ಬಲ ತಂಡಗಳೊಡನೆ ಸಮನಾಗಿ ಹಂಚಿಕೊಂಡಿರುವುದರಿಂದ ಇವು ನಾಕೌಟ್ ಹಂತ ಪ್ರವೇಶಿಸುವುದೀಗ ಅಷ್ಟೊಂದು ಸುಲಭವೇನಲ್ಲ. ಈ ಕಾರಣದಿಂದಾಗಿ ಇವುಗಳ ಮುಂದಿನ ಪಂದ್ಯಗಳು ಕುತೂಹಲಕರ.
ಇಂದು ನಡೆಯುವ ಎರಡು ಪಂದ್ಯಗಳ ಪೈಕಿ ಅರ್ಜೆಂಟೀನಾ-ನೈಜೀರಿಯಾ ನಡುವಿನ ಪಂದ್ಯ ಮತ್ತು ನಾಳೆ (ಇಂದು ರಾತ್ರಿ) 00-00 ಗಂಟೆಗೆ ನಡೆಯುವ ಇಂಗ್ಲೆಂಡ್-ಯುಎಸ್‌ಎ ನಡುವಿನ ಪಂದ್ಯ ಇವೆರಡೂ ತೀವ್ರ ಹಣಾಹಣಿಯ ಪಂದ್ಯಗಳಾಗುವ ನಿರೀಕ್ಷೆಯಿದೆ. ಎರಡರ ವೀಕ್ಷಣೆಯನ್ನೂ ತಪ್ಪಿಸಿಕೊಳ್ಳಬೇಡಿ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications