ರಾಜ್ ಕುಮಾರ್ ಬಿಡುಗಡೆ ಹಣ ಗುಳುಂ

ಕಾಂಗ್ರೆಸ್ ಪಕ್ಷದ ಮರ್ಯಾದೆ ನಡುಬೀದಿ'ನೆರೆ'ಯಲ್ಲಿ ಕೊಚ್ಚಿ ಹೋಗುತ್ತಿರುವ ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಬಿ ಜೆ ಪುಟ್ಟಸ್ವಾಮಿ ಮಂಗಳವಾರ (ಜೂ 8) ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ರಾಜಕುಮಾರ್ ಅಪಹರಣದ ಸಂದರ್ಭದಲ್ಲಿ ಅವರ ಬಿಡುಗಡೆಗೆ ಕೋಟ್ಯಾಂತರ ರುಪಾಯಿ ಹಣ ಸಂಗ್ರಹಿಸಲಾಗಿತ್ತು. ಈ ಕಾಂಗ್ರೆಸ್ ಪಕ್ಷದ ನಾಯಕರುಗಳು ಆ ಹಣವನ್ನೂ ಬಿಡಲಿಲ್ಲ ಅದನ್ನೂ ದುರುಪಯೋಗ ಪಡಿಸಿಕೊಂಡಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಮಧ್ಯೆ ನೆರೆ ಪರಿಹಾರಕ್ಕೆ ಸಂಗ್ರಹಿಸಲಾಗಿದ್ದ ದೇಣಿಗೆ ಹಣದಲ್ಲಿ ತಮ್ಮ ವಿಮಾನಯಾನ ಟಿಕೆಟ್ ಗೆ ಖರ್ಚು ಮಾಡಿದ್ದ ಹಣವನ್ನು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು 'ಸಜ್ಜನ' ರಾಜಕಾರಿಣಿ ಎಂ ವಿ ರಾಜಶೇಖರನ್ ಪಕ್ಷಕ್ಕೆ ಹಿಂದಿರುಗಿಸಿದ್ದಾರೆ. ನಮ್ಮ ಪಕ್ಷದ ನಾಯಕರುಗಳು ದೇಣಿಗೆ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದನ್ನು ಊಹಿಸಲೂ ಸಾಧ್ಯವಾಗದು, ಇದು ತೀರಾ ದುರದೃಷ್ಟಕರ ಎಂದು ಅವರು ನೋವು ವ್ಯಕ್ತಪಡಿಸಿದ್ದಾರೆ.
ಓದಲು ಮರೆಯದಿರಿ
ರಾಜ್‌ಕುಮಾರ್ ಬಿಡುಗಡೆಯ ನಂತರ ಉದ್ದೇಶಿಸಿದ ಪತ್ರಿಕಾಗೋಷ್ಠಿ
ರಾಜ್ ಆಡಿದ ಮಾತುಗಳ ಪೂರ್ಣ ಪಾಠ ಇಲ್ಲಿದೆ....
ದಟ್ಸ್ ಕನ್ನಡ ಉಚಿತ ನ್ಯೂಸ್ ಲೆಟರಿಗೆ ಚಂದಾದಾರರಾಗಿ
ಕನ್ನಡ ಟ್ವಿಟ್ಟರ್ ಬಳಗವನ್ನು ಸೇರಿಕೊಳ್ಳಿ











Click it and Unblock the Notifications